ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಪೆರಾಲು ಪದವು ಎಂಬಲ್ಲಿನ ಮಹೇಶ್‌ ಪೂಜಾರಿ ಎಂಬ ಯುವಕ ಇಂದು ಬೆಳಗ್ಗೆ ಸಮೀಪದ ರಬ್ಬರ್‌ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ

.

ಪೆರಾಲು ಅಂಚೆ ಕಚೇರಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತ ಕಳೆದ ಕೆಲವು ದಿನಗಳ ಹಿಂದೆ ಅಂಗಡಿ ಮಾಲೀಕರೊಬ್ಬರು ಅಂಚೆ ಕಚೇರಿಗೆ ಕಟ್ಟಲು ₹50,000 ನೀಡಿದ್ದರು. ಆದರೆ ಮಹೇಶ್‌ ಪೂಜಾರಿ ಅಂಚೆ ಕಚೇರಿಗೆ ಕಟ್ಟಿರಲಿಲ್ಲ. ಇದನ್ನು ಹಣ ನೀಡಿದ ಅಂಗಡಿ ಮಾಲೀಕ ಪ್ರಶ್ನಿಸಿದ್ದಾರೆ. ಇದರಿಂದ ಹಣ ಹೊಂದಿಸಲು ಸಾಧ್ಯವಾಗದೆ ಮನನೊಂದು ಆತ್ಮಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ