ವಿರಾಟ್ ಕೊಹ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ತಮ್ಮ 35 ನೇ ಹುಟ್ಟುಹಬ್ಬದಂದು ಅಜೇಯ 101 ರನ್ ಗಳಿಸುವ ಮೂಲಕ ತೆಂಡೂಲ್ಕರ್ ಅವರ ಏಕದಿನದಲ್ಲಿ 49 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಶತಕದ ಮೂಲಕ ಅವರು ಈಗಿನ ಕಾಲದ ಅತ್ಯುತ್ತಮ ಆಟಗಾರರಲ್ಲೊಬ್ಬರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಐಸಿಸಿ ವೆಬ್‌’ಸೈಟ್‌ ಜೊತೆ ಮಾತನಾಡಿದ ರಿಕಿ ಪಾಂಟಿಂಗ್, ”ಕೊಹ್ಲಿ ವಿಶ್ವದ ಅತ್ಯುತ್ತಮ ಆಟಗಾರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಾನು ಇದನ್ನು ಬಹಳ ಸಮಯದಿಂದ ಹೇಳುತ್ತಿದ್ದೇನೆ. ಇದಕ್ಕಾಗಿ ಅವರು ಸಚಿನ್ ದಾಖಲೆಯನ್ನು ಸರಿಗಟ್ಟುವ ಮತ್ತು ಮುರಿಯುವ ಅಗತ್ಯವಿಲ್ಲ. ಇನ್ನು ಟೀಂ ಇಂಡಿಯಾದ ಬೌಲಿಂಗ್ ಇಡೀ ವಿಶ್ವದಲ್ಲೇ ಬಲಿಷ್ಟವಾಗಿದೆ” ಎಂದು ಹೇಳಿದರು, “ಏಕದಿನದಲ್ಲಿ 49ನೇ ಶತಕ ಬಾರಿಸುವ ಮೂಲಕ ಸಚಿನ್ ಅವರ ದಾಖಲೆಯನ್ನು ವಿರಾಟ್ ಸರಿಗಟ್ಟಿದ್ದಾರೆ. ಈ ಸಾಧನೆ ಮಾಡಲು ಅವರು ಸಚಿನ್ ಅವರಿಗಿಂತ 175 ಇನ್ನಿಂಗ್ಸ್‌’ಗಳನ್ನು ಕಡಿಮೆ ಆಡಿದ್ದಾರೆ ಎಂದು ಭಾವಿಸುವುದು ನಂಬಲಾಗದ ಸಂಗತಿಯಾಗಿದೆ” ಎಂದು ರಿಕಿ ಪಾಂಟಿಂಗ್ ಹೇಳಿದರು.

“49ನೇ ಶತಕ ಮನಸ್ಸಿನಲ್ಲಿ ಉಳಿದುಕೊಳ್ಳುವಂತಹದ್ದು, ಸಚಿನ್ ದಾಖಲೆ ಸರಿಗಟ್ಟಲು ಅವರು ಹೆಚ್ಚು ಶ್ರಮಿಸಿದ್ದಾರೆ ಎಂದು ನಾನು ನಂಬುತ್ತೇನೆ. ಈಗ ಅವರು ಈ ದಾಖಲೆಯನ್ನು ಸರಿಗಟ್ಟಿದ್ದಾರೆ ಮತ್ತು ಇದು ಪಂದ್ಯಾವಳಿಯಲ್ಲಿ ಸರಿಯಾದ ಸಮಯದಲ್ಲಿ ಸಂಭವಿಸಿದೆ. ವಿರಾಟ್ ಮತ್ತು ಭಾರತಕ್ಕೆ ಇದು ತುಂಬಾ ಒಳ್ಳೆಯ ದಿನವಾಗಿತ್ತು” ಎಂದಿದ್ದಾರೆ.ಅಂದಹಾಗೆ ರಿಕಿ ಪಾಂಟಿಂಗ್ ಅವರು ಭಾರತದ ಬೌಲರ್‌’ಗಳ ಪ್ರದರ್ಶನದಿಂದ ಪ್ರಭಾವಿತರಾಗಿದ್ದಾರೆ. “ದಕ್ಷಿಣ ಆಫ್ರಿಕಾವನ್ನು ಕೇವಲ 83 ರನ್‌’ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ವಿಶ್ವದಲ್ಲೇ ಅತ್ಯುತ್ತಮವಾಗಿದೆ” ಎಂದು ಅವರು ಹೇಳಿದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ