ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಮತ್ತು ಆದರ್ಶ ಆಂಗ್ಲ ಮಾಧ್ಯಮ ಶಾಲೆ ಇದರ ಸಹಯೋಗದಲ್ಲಿ ತೋಡಾರ್ ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.

ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ ವಹಿಸಿದ್ದರು ದಿಕ್ಸೂಚಿ ಭಾಷಣ ಮಾಡಿದ ಮೀಫ್ ಪ್ರದಾನ ಕಾರ್ಯದರ್ಶಿ ರಿಯಾಜ್ ಕಣ್ಣೂರು ಮಾತನಾಡಿ 1888 ನವೆಂಬರ್ 11 ರಂದು ಜನಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಧಾರ್ಮಿಕ ಅಡಿಪಾಯದ ರಾಷ್ಟ್ರೀಯತೆ ಯನ್ನು ಜಗತ್ತಿಗೆ ಅನಾವರಣಗೊಳಿಸಿದ ಹೆಗ್ಗಳಿಕೆ ಕಲಾಂ ಅವರದ್ದು, ಇವರ ದೇಶ ಸೇವೆ ಭಾವೈಕ್ಯತೆ , ಸರ್ವ ಧರ್ಮ ಸಮನ್ವತೆಯ ಪ್ರತೀಕವಾದ ಕಲಾಂ ರವರನ್ನು ಸ್ವಾತ್ರಂತ್ಯ ಭಾರತದ ಪ್ರಥಮ ಶಿಕ್ಷಣ ಸಚಿವರಾದ ಮೌಲಾನ ಅಬುಲ್ ಕಲಾಂ ರವರ ಆದರ್ಶ ಜೀವನ ಮುಂದಿನ ಜನಾಂಗಕ್ಕೆ ಮಾದರಿಯಾಗಬೇಕು ಎಂದರು
ವೇದಿಕೆಯಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯ ಸಂಚಾಲಕ ಎಂ.ಎಸ್. ಮಹಮ್ಮದ್, ಟ್ರಸ್ಟಿ ಅಬೂಬಕ್ಕರ್, ಮುಖ್ಯೋಪಾಧ್ಯಾಯಿನಿ ಡಾ. ಶಾಂತಿ ವಿಜಯ್, ಮೀಫ್ ನಿರ್ದೇಶಕರುಗಳಾದ ಸಿರಾಜ್ ಮಣೆಗಾರ ಜೋಕಟ್ಟೆ, ಶಾರಿಕ್ ಪ್ರೋಗ್ರಾಂ ಡೈರೆಕ್ಟರ್ ಮೊದಲಾದವರು ಉಪಸ್ಥಿತರಿದ್ದರು ಶಿಕ್ಷಕಿ ವಿವೆಟ್ ಡಿ ‘ಸೋಜ, ಕಾರ್ಯಕ್ರಮದ ಮಹತ್ವದ ಬಗ್ಗೆ ಶಿಕ್ಷಕಿ ರಫೀದ ವಿವರಿಸಿ, ಶಿಕ್ಷಕಿ ಲತಾ ಸ್ವಾಗತಿಸಿ ವಂದಿಸಿದರು. ಮೌಲಾನ ಅಬ್ದುಲ್ ಕಲಾಂ ರವರ ಜೀವನ ಚರಿತ್ರೆಬಗ್ಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ ಸ್ಥಳದಲ್ಲೇ ಬಹುಮಾನ ವಿತರಿಸಲಾಯಿತು

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ