ಅಹಮದಾಬಾದ್‌(ನ.12): ಆಫ್ಘಾನಿಸ್ತಾನ ಕ್ರಿಕೆಟ್ ತಂಡವು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಿಟ್ಟ ಹೋರಾಟದ ಹೊರತಾಗಿಯೂ ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿದೆ.

ಆದರೆ ಟೂರ್ನಿಯುದ್ದಕ್ಕೂ ಆಫ್ಘಾನ್ ಕ್ರಿಕೆಟ್ ತಂಡದ ಆಟಗಾರರ ತೋರಿದ ಕೆಚ್ಚೆದೆಯ ಹೋರಾಟ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ರೆಹಮನುಲ್ಲಾ ಗುರ್ಬಾಜ್, ಅಹಮದಾಬಾದ್‌ನ ನಿರ್ಗತಿಕರ ಪಾಲಿಗೆ ಆಸರೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಹೌದು, ಇಡೀ ದೇಶವೇ ಬೆಳಕಿನ ಹಬ್ಬವಾದ ದೀಪಾವಳಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಿದೆ. ಒಂದು ಕಡೆಯಾದರೆ, ಮತ್ತೊಂದೆಡೆ ಇನ್ನೂ ಎಷ್ಟೋ ಮಂದಿ ಈಗಲೂ ದೇಶದಲ್ಲಿ ತುತ್ತು ಊಟಕ್ಕೆ, ನೆಮ್ಮದಿಯ ಆಸರೆಯನ್ನು ಪಡೆಯಲು ಪರದಾಡುತ್ತಿದ್ದಾರೆ ಎನ್ನುವುದು ಕೂಡಾ ನಗ್ನ ಸತ್ಯ. ಹೀಗಿರುವಾಗ ಆಫ್ಘಾನಿಸ್ತಾನ ಆರಂಭಿಕ ಬ್ಯಾಟರ್ ರೆಹಮನುಲ್ಲಾ ಗುರ್ಬಾಜ್, ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಅಹಮದಾಬಾದ್‌ನ ರಸ್ತೆ ಬದಿ ಮಲಗಿಕೊಂಡಿದ್ದ ನಿರ್ಗತಿಕರಿಗೆ ತಾವು ಸಂಪಾದಿಸಿದ ಹಣವನ್ನು ದಾನ ಮಾಡುವ ಮೂಲಕ ದೀಪಾವಳಿ ಆಚರಿಸಲು ಸರ್ಪ್ರೈಸ್ ನೀಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ತನ್ನದೇ ದೇಶವು ತಾಲಿಬಾನಿಗಳ ಕಪಿಮುಷ್ಠಿಗೆ ಸಿಲುಕಿದ್ದರೂ, ಭಾರತದಲ್ಲಿರುವ ಬಡವರಿಗೆ ನೆರವಾಗಬೇಕು ಎಂದು ಮುಂದಾದ ಗುರ್ಬಾಜ್ ಅವರನ್ನು ನೆಟ್ಟಿಗರು ನೀನಂತೂ ದೇವ ಮಾನವನಾಗಿಬಿಟ್ಟೆ ಬಿಡು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗುಣಗಾನ ಮಾಡಿದ್ದಾರೆ.

https://x.com/mufaddal_vohra/status/1723550985401040963?s=20

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ