ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕಪ್ನ ಕೊನೆಯ ಲೀಗ್ ನ ಭಾರತ ಹಾಗೂ ನೆದರ್ಲ್ಯಾಂಡ್ಸ್ ತಂಡದ ನಡುವಿನ ಪಂದ್ಯದಲ್ಲಿ ಭಾರತ ತಂಡ 410 ಅಂಕಗಳನ್ನು ಕಲೆಹಾಕಿ ಬೃಹತ್ ಮೊತ್ತದ ಗುರಿಯನ್ನು ನೀಡಿದೆ. ಆರಂಭಿಕ ಆಟಗಾರರಾಗಿ ಕ್ರೀಸ್ ಗೆ ಬಂದಿಳಿದ ರೋಹಿತ್ 54 ಎಸೆತಗಳ ಮುಂದೆ 61 ಅಂಕಗಳನ್ನು ಸಿಡಿಸಿದರು,

ಹಾಗೇ ಗಿಲ್ 32 ಎಸೆತಗಳ ಮುಂದೆ 51 ಅಂಕಗಳನ್ನು ತಂಡಕ್ಕಾಗಿ ಸೇರಿಸಿದರು. ಪ್ರಥಮ ವಿಕೆಟ್ ನಂತರ ಬಂದ ವಿರಾಟ್ ಕೊಹ್ಲಿ 56 ಎಸೆತಗಳ ಮುಂದೆ 51 ಅಂಕಗಳನ್ನು ಸೇರಿಸಿದರು. ಮುಂದೆ ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್ ರಾಹುಲ್ ಸಂಚೂರಿಯನ್ನು ಬಾರಿಸಿದರು. ಅಯ್ಯರ್ 94 ಎಸೆತಗಳ ಮುಂದೆ 128, ಹಾಗೂ ಕೆ.ಎಲ್ ರಾಹುಲ್ 64 ಎಸೆತಗಳ ಮುಂದೆ 102 ಅಂಕಗಳ‌ನ್ನು ಕಲೆ ಹಾಕಿದ್ದರು. ಸೂರ್ಯ ಕುಮಾರ್ ಯಾದವ್ 1 ಎಸೆತಗಳ ಮುಂದೆ 1 ಅಂಕಗಳನ್ನು ಕಲೆ ಹಾಕಿ ಅಜೇಯರಾಗಿ ಉಳಿದರು.ಇಂಡಿಯಾದ ಮಧ್ಯಮ ಕ್ರಮಾಂದಕ ಬ್ಯಾಟರ್ ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್ನಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. 84 ಎಸೆತಗಳ ಮುಂದೆ ಶತಕ ಬಾರಿಸಿ, ಬ್ಯಾಟಿಂಗ್ ಮುಂದುವರೆಸುತ್ತಿದ್ದಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ