ಮಹಿಳೆಯರ ವಿಭಾಗ: ಟಿಎಂಸಿ ತಾಣೆ ಪ್ರಥಮ, ನ್ಯಾಷನಲ್ ಬೆಂಗಳೂರು ದ್ವಿತೀಯ

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ವತಿಯಿಂದ ಕಳೆದ ಮೂರು ದಿನಗಳಿಂದ ಆಯೋಜಿಸಿದ್ದ ಪುರುಷರ ಹಾಗೂ ಮಹಿಳೆಯರ ರಾಷ್ಟ್ರೀಯ ಏ ಗ್ರೇಡ್ ಕಬಡ್ಡಿ ಪಂದ್ಯಾಕೂಟಕ್ಕೆ ವರ್ಣರಂಜಿತ ತೆರೆಬಿದ್ದಿದೆ. ಕೂಟದ ಚಾಂಪಿಯನ್ ಪಟ್ಟವನ್ನು ಬ್ಯಾಂಕ್ ಆಫ್ ಬರೋಡಾ ತಂಡ ಗೆದ್ದುಕೊಂಡಿತು. ಭಾನುವಾರ ರಾತ್ರಿ ನಡೆದ ಫೈನಲ್ ನಲ್ಲಿ ಯೇನೆಪೋಯ ಯೂನಿವರ್ಸಿಟಿ ತಂಡವನ್ನು 26-31 ಅಂಕದಿಂದ ರೋಚಕ ಸೆಣಸಾಟದಲ್ಲಿ ಸೋಲಿಸಿತು.ಫೈನಲ್ ಹಣಾಹಣಿ ಏಕಮುಖಿ ಎಂದುಕೊಂಡ ಪ್ರೇಕ್ಷಕರಿಗೆ ಯೇನಪೋಯ ಯುನಿವರ್ಸಿಟಿ ತಂಡ ಟಕ್ಕರ್ ನೀಡುವಂತ ಪ್ರದರ್ಶನ ತೋರಿತು. ಭಾನುವಾರ ತಡರಾತ್ರಿ ನಡೆದ ಫೈನಲ್ ಪಂದ್ಯ ಸಮಯ ಕಳೆಯುತ್ತಿದ್ದಂತೆ ರೋಚಕತೆಯತ್ತ ಹೊರಳಿತು. ಆರಂಭದ ಹಂತದಲ್ಲಿ ತಾರಾ ಆಟಗಾರರನ್ನು ಹೊಂದಿದ್ದ ಬ್ಯಾಂಕ್ ಆಫ್ ಬರೋಡಾ ತಂಡಕ್ಕೆ ಯೇನೆಪೋಯ ಯೂನಿವರ್ಸಿಟಿ ತಂಡ ಭಾರಿ ಹೊಡೆತ ನೀಡಿ ಮುನ್ನುಗ್ಗಿತು. ತಂಡದ ಪರ ಕೌಶಿಕ್ ಮಿಂಚಿನ ಆಟವನ್ನು ಪ್ರದರ್ಶಿಸಿದರು. ಆದರೆ ಕೊನೆಯ ಹಂತಗಳಲ್ಲಿ ಬ್ಯಾಂಕ್ ಆಫ್ ಬರೋಡಾ ತನ್ನ‌ಕೊನೆಯ ಎಲ್ಲ ಅಸ್ತ್ರವನ್ನು ಪ್ರಯೋಗಿಸಿ ಕೊನೆಯ ಐದು ನಿಮಿಷ ಗೇಮ್ ಚೇಂಜರ್ ಎನಿಸಿಕೊಂಡಿತು. ಹಾಗೇ ಬ್ಯಾಂಕ್ ಆಫ್ ಬರೋಡಾ ಗೆದ್ದು ಬೀಗಿ ಚಾಂಪಿಯನ್ ಪಟ್ಟ ಅಲಂಕರಿಸಿಕೊಂಡಿತು ಜೊತೆಗೆ ತಂಡವು ₹1 ಲಕ್ಷ ಹಾಗೂ ಟ್ರೋಫಿ ಪಡೆದುಕೊಂಡರೆ, ಯೇನೆಪೋಯ ಯುನಿವರ್ಸಿಟಿ ರನ್ನರ್ ಅಪ್ ಹಾಗೂ ₹65 ಸಾವಿರ ತನ್ನ‌ಬಗಿಲಿಗೆ ಹಾಕಿಕೊಂಡಿತು. ತೃತೀಯ ಬಹುಮಾನ ₹35 ಸಾವಿರ ಹಾಗೂ ಟ್ರೋಫಿಯನ್ನು ಆಳ್ವಾಸ್ ಮೂಡುಬಿದಿರೆ ಪಡೆದುಕೊಂಡರೆ, ಚತುರ್ಥ ಬಹುಮಾನ ₹35 ಸಾವಿರ ಹಾಗೂ ಟ್ರೋಫಿಯನ್ನು ಟಿಎಂಸಿ ತಾಣೆ (ಮಹಾರಾಷ್ಟ್ರ) ಸ್ವೀಕರಿಸಿತು.

ಇನ್ನೂ ಮಹಿಳೆಯರ ವಿಭಾಗದ ಕಬಡ್ಡಿ ಪಂದ್ಯದಲ್ಲಿ ಟಿಎಂಸಿ ತಾಣೆ ಪ್ರಥಮ ಸ್ಥಾನ ಹಾಗೂ ₹50 ಸಾವಿರ, ನ್ಯಾಷನಲ್ ಬೆಂಗಳೂರು ದ್ವಿತೀಯ ಸ್ಥಾನ ಹಾಗೂ ₹30 ಸಾವಿರ, ಕನ್ಯಾಕುಮಾರಿ ತೃತೀಯ ಹಾಗೂ ₹20 ಸಾವಿರ, ಪಾಂಡಿಚೇರಿ ಚತುರ್ಥ ಹಾಗೂ ₹20 ಸಾವಿರ ಹಾಗೂ ಶಾಶ್ವತ ಫಲಕ ಪಡೆದುಕೊಂಡರು. ಸಮಾರಂಭದಲ್ಲಿ ಅತಿಥಿಗಳು ಬಹುಮಾನ ವಿತರಿಸಿದರು. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ