ಎಂಸಿಸಿ ಅಥವಾ ಮಾರ್ನಿಂಗ್ ಕ್ರಿಕೆಟ್ ಕ್ಲಬ್ (ರಿ) ಸುಳ್ಯ , ಕ್ಲಬ್ ಸುಳ್ಯ ತಾಲೂಕಿನ ಮಟ್ಟದಲ್ಲಿ ಕೇಳರಿಯದವರು ಬಹಳ ವಿರಳ, ಕ್ರೀಡಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಕಲೆ, ಸಾಮಾಜಿಕ, ಹೀಗೆ ಹಲವು ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಸಂಘಟನೆ ಎಂ.ಸಿ.ಸಿ. ಇದರ ದಶಮಾನೋತ್ಸವ ಕಾರ್ಯಕ್ರಮವು ಬಹಳ ಅದ್ದೂರಿ ಆಗಿ ಸುಂದರವಾದ ವೇದಿಕೆಯಲ್ಲಿ ಅರ್ಥಗರ್ಭಿತಾವಾಗಿ ಸುಮಾರು 6 ಜನರ ಗಣ್ಯರ ಉಪಸ್ಥಿತಿಯಲ್ಲಿ ಜರುಗಿತು.

ಕ್ಲಬ್ ಸದಸ್ಯರು ಆಗಿರುವ ಕೇಶವ ಇವರು ಪ್ರಾರ್ಥನೆ ಮೂಲಕ ಆರಂಭಿಸಲಾಯಿತು.

ಕಾರ್ಯಕ್ರಮವನ್ನು ನಮ್ಮ ಹೆಮ್ಮೆಯ ನಿರೂಪಕ VJ ವಿಖ್ಯಾತ್ ಇವರು ಅತ್ಯಂತ ಸುಂದರವಾಗಿ ನಿರೂಪಿಸಿದರು.

ಗಣ್ಯ ಅತಿಥಿಗಳನ್ನು ಹಾಗೂ ಕಾರ್ಯಕ್ರಮಕ್ಕೆ ಬಂದ ಎಲ್ಲಾ ಸಭಿಕರನ್ನು ಕ್ಲಬ್ ನ ದಶಮಾನೋತ್ಸವದ ಕಾರ್ಯದರ್ಶಿ ಆಗಿರುವ ರವಿ ದೊಡ್ಡೇರಿ ಇವರು ಸ್ವಾಗತಿಸಿದರು.

ಕಾರ್ಯಕ್ರಮದ ವಿವರ:

ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗಾವಹಿಸಿದ ಸತೀಶ್ ಕೊಇಂಗಾಜೆ ಇವರು ಎಂಸಿಸಿ ಕ್ಲಬ್ ನ ಸಾಧನೆಯ ಹಾದಿಯನ್ನು ಬಹಳ ಅಚ್ಚು ಕಟ್ಟಾಗಿ ವಿವರಿಸಿದರು.

ಮುಖ್ಯಅತಿಥಿ ನೆಲೆಯ್ಲಲಿ ಮಾತನಾಡಿದ ಪ್ರಕಾಶ್ ಮೂಡಿತ್ತಾಯ ಅವ್ರು ಅವರ ಬಾಲ್ಯದ ಜೀವನದ ನೆನಪನ್ನು ಮಾಡುತ್ತಾ ಮುಂದಿನ ದಿನದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಇದರ ಒಂದು ಅಂಗವಾಗಿ ಎಂಸಿಸಿ ಯನ್ನು ಮಾಡುವ ಎನ್ನುವ ಮಾತನ್ನು ಮುಂದಿಟ್ಟರು.

ಮುಂದೆ ಇನ್ನೊರ್ವ ಮುಖ್ಯ ಅತಿಥಿ MB ಸದಾಶಿವ ಅವರು ಮಾತಾಡಿ ವಿಶೇಷ ಮಕ್ಕಳ ಜೀವನ ಶೈಲಿ ಹಾಗೂ ಸಾಂದೀಪ ಶಾಲೆ ಯ ವಿಸ್ತಾರವಾದ ವಿಚಾರವನ್ನು ಮುಂದಿಟ್ಟರು.

ಇನ್ನೊರ್ವ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಲು ಡಯಾಸ್ ಗೆ ಆಗಮಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಸರ್ ಅಂದ್ರೆ ಅದು ನಟರಾಜ್ ಸರ್ ಅವರು ಅಳುತ್ತಾ ಸುಮಾರು 2 ನಿಮಿಷ ಮೌನವಾಗಿ ಹೋದರು ಅವರ ಬಾಯಿಂದ ಯಾವುದೇ ಮಾತು ಬರುತ್ತಿರಲಿಲ್ಲ ಕಾರಣ ಅವರಿಗೆ ನಮ್ಮ ಕ್ಲಬ್ ನ ಮೇಲಿರುವ ಗೌರವ ಹಾಗೂ ನಾವೆಲ್ಲರೂ ಅವರಿಗೆ ತೋರುವ ಪ್ರೀತಿ ಒಂದೆಡೆ ಆದರೇ ಅವರ ವೃತಿ ಜೀವನದ ಕೊನೆಯ ವರುಷದ ಸೇವೆ. ಆಮೇಲೆ ಸ್ವಲ್ಪ ಸಮಾಧಾನ ಮಾಡಿಕೊಂಡು ಅದ್ಭುತವಾಗಿ ಮಾತನಾಡಿ ಶುಭ ಹಾರೈಸಿದರು.

ಮುಂದೆ ಎಲ್ಲಾ ಗಣ್ಯರ ಉಪಸ್ಥಿತಿಯಲ್ಲಿ ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮ ಅದ್ದೂರಿ ಆಗಿ ನಡೆಯಿತು.

ಆಮೇಲೆ ಮೊದಲನೆಯದಾಗಿ ಸನ್ಮಾನ ಸ್ವೀಕರಿಸಿದ ಜಬ್ಬಾರ್ ಸಮೋ( ಯಕ್ಷಗಾನ ಕ್ಷೇತ್ರ) ಇವರು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯದಲ್ಲಿ ಮಾಡಿದ ಭಾಷಣ ದಶಮಾನೋತ್ಸವ ಮಾಡಿದ್ದೂ ಸಾರ್ಥಕ ಭಾವನೆ ಮೂಡಿದ್ದು ಮಾತ್ರ ಸುಳ್ಳಲ್ಲ,

ನಂತರ ಕೊನೆದಾಗಿ MB ಫೌಂಡೇಶನ್ ಗೆ ಎಂಸಿಸಿ ವತಿಯಿಂದ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.

ಕೊನೆಯದಾಗಿ VJ ವಿಖ್ಯಾತ್ ಅವ್ರು ಧನ್ಯವಾದ ಕಾರ್ಯಕ್ರಮ ವನ್ನು ಅರ್ಥ ಗರ್ಭಿತವಾಗಿ ಮುಗಿಸಿದರು.

ಕಾರ್ಯಕ್ರಮವು ಒಂದು ಇಮೋಷನಲ್ ಆಗಿ ಕೊನೆಗೊಂಡಿದ್ದು ಮಾತ್ರ ಅದ್ಬುತ.

ಹಾಗೂ ಕಿರಣ್ ಅವರ ಫೋಟೋ ಚಿತ್ರೀಕರಿಸಿದರು.

Leave a Reply

Your email address will not be published. Required fields are marked *