ಚಿಕ್ಕಬಳ್ಳಾಪುರ: ಆಟೋ ರಿಕ್ಷಾ ಹಾಗೂ ಕಂಟೈನರ್ ಸಾಗಿಸುವ ಲಾರಿ (Lorry) ನಡುವೆ ಭೀಕರ ಅಪಘಾತವಾಗಿ (Accident) ಆಟೋ ಚಾಲಕ ಸೇರಿದಂತೆ 10 ವಿದ್ಯಾರ್ಥಿಗಳಿಗೆ ಗಾಯಗಳಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗೌರಿಬಿದನೂರಿನಲ್ಲಿ (Gowribidanur) ನಡೆದಿದೆ.

ಗೌರಿಬಿದನೂರು ನಗರದ ನಾಗಪ್ಪ ಸರ್ಕಲ್‌ನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಗಾಯಾಳು ವಿದ್ಯಾರ್ಥಿಗಳೆಲ್ಲರೂ ಗೌರಿಬಿದನೂರು ನಗರದ ಮುನ್ಸಿಪಲ್ ಕಾಲೇಜಿನವರು. ಅಪಘಾತದ ರಭಸಕ್ಕೆ ಆಟೋ ರಿಕ್ಷಾ (Auto) ಸಂಪೂರ್ಣ ನಜ್ಜುಗುಜ್ಜಾಗಿದೆ. 11 ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಸದ್ಯ ಗಾಯಾಳುಗಳನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ