ಹೆಚ್ಚುವರಿಯಾಗಿ ₹50,000 ಸ್ವಂತ ಹಣ ವ್ಯಯಿಸಿ, ಕೊಠಡಿ ನಿರ್ಮಾಣ ಮಾಡಿರುವ ನಗರ ಪಂಚಾಯತ್ ಸದಸ್ಯ ಶ್ರೀ ಶರೀಫ್ ಕಂಠಿ

ಮಕ್ಕಳ ದಿನಾಚರಣೆ ಪ್ರಯುಕ್ತ,ಈ ದಿನ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ , ಅಂಗನವಾಡಿನೂತನ ಕೊಠಡಿ ಉದ್ಘಾಟನೆ, ಹಾಗೂ ಮಕ್ಕಳ ದಿನಾಚರಣೆಯನ್ನು ನೆರವೇರಿಸಲಾಯಿತು ಇದರ ಅಧ್ಯಕ್ಷತೆಯನ್ನುCDPO ಶೈಲಜ ಮೇಡಂ ವೈಸಿದ್ರು ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಸುಮಾರು ಒಂದು ಲಕ್ಷದ ಐವತ್ತು ಸಾವಿರ ವೆಚ್ಚದಲ್ಲಿ ನಿರ್ಮಾಣವಾದ ನೂತನ ಕೋಟಡಿಯನ್ನು, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಯವರು ಉದ್ಘಾಟಿಸಿ ಶುಭ ಹಾರೈಸಿದರು. ನಗರ ಪಂಚಾಯತ್ ಸದಸ್ಯರಾದ ಶ್ರೀ ಶರೀಫ್ ಕಂಠಿ ಅವರು ಮಾತನಾಡಿ, ನೂತನ ಕೊಠಡಿಗೆ ಇಲಾಖೆ ವತಿಯಿಂದ, ಒಂದು ಲಕ್ಷ ಅನುದಾನ ಬಂದಿದ್ದು, ಎಸ್ಟಿಮೇಟ್ ಗಿಂತ ಅಧಿಕ ವಿಸ್ತೀರ್ಣ ನಿರ್ಮಾಣ ಮಾಡಿರುತ್ತೇನೆ. ಈ ನೂತನ ಕೊಠಡಿಗೆ ಹೆಚ್ಚುವರಿಯಾಗಿ ಸುಮಾರು ಐವತ್ತು ಸಾವಿರದಷ್ಟು ಅಧಿಕ ಖರ್ಚು ಆಗಿದ್ದು ನಾನು, ಸ್ವತಃ ಕೈಯ್ಯಿಂದ, ಹಾಕಿ ಪೂರ್ತಿಗೊಳಿಸಿರುತ್ತೇನೆ. ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೂತನ ಅಧಿಕಾರಿಯವರಾದ ಶ್ರೀಮತಿ ಶೈಲಜ ರವರನ್ನು ನ ಪಂ ಸದಸ್ಯ ಶರೀಫ್ ಕಂಠಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ, ಉದ್ಯಮಿ ರೊ ಜೆ.ಕೆ.ರೈ, ನಗರ ಪಂಚಾಯತ್ ನ ಸದಸ್ಯ ರಿಯಾಜ್ ಮುಸ್ತಾಫ km , ಶುಭಶ್ರೀ ಮಹಿಳಾ ಮಂಡಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇಕ್ಬಾಲ್ ಸುಣ್ಣಮೂಲೆ ಅಂಗನವಾಡಿ ಕಾರ್ಯಕರ್ತೆ ಅಧ್ಯಾಪಕರು ಪುಟಾಣಿ ಮಕ್ಕಳು ಹಾಗೂ ಪೋಷಕರು ಹಾಜರಿದ್ದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ