ಕರ್ನಾಟಕ ಸರಕಾರದ ನಗರಾಭಿವೃದ್ದಿ ಮತ್ತು ನಗರ ಯೋಜನಾ ಇಲಾಖೆ ಸಚಿವರಾದ ಭೈರತಿ. ಎಸ್. ಸುರೇಶ್ ಮಂಗಳೂರಿಗೆ ಪ್ರಥಮ ಬಾರಿಗೆ ಆಗಮಿಸಿ ಜಿಲ್ಲೆಯ ಎಲ್ಲಾ ನಗರ ಯೋಜನಾ ಪ್ರಾಧಿಕಾರಗಳ ಪ್ರಗತಿ ಮತ್ತು ಸಮಸ್ಯೆಗಳ ಪರಿಶೀಲನಾ ಸಭೆ ನಡೆಸಲು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ಮತ್ತು ಜಿಲ್ಲಾ ಯೋಜನಾ ಸಮಿತಿ ಮಾಜಿ ಸದಸ್ಯ ಕೆ. ಎಂ. ಮುಸ್ತಫ ಭೇಟಿ ಮಾಡಿ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಸಮಸ್ಯೆ ಗಳ ಬಗ್ಗೆ ಮನವಿ ಸಲ್ಲಿಸಿದರು


ಸುಳ್ಯ ನಗರವು ಗ್ರಾಮೀಣ, ಗುಡ್ಡ ಗಾಡು ಪ್ರದೇಶವಾಗಿದ್ದು ವಿಶೇಷ ಭೌಗೋಳಿಕ ಪ್ರದೇಶ ವಾಗಿರುತ್ತದೆ, ಒಂದು ಕಡೆ ಪಶ್ಚಿಮ ಘಟ್ಟ, ಇನ್ನೊಂದು ಕಡೆ ಪಯಶ್ವಿನಿ ನದಿ ಅಲ್ಲದೆ ಎತ್ತರ ತಗ್ಗುಗಳಿಂದ ಕೂಡಿ ಅಭಿವೃದ್ಧಿ ಗೆ ಭೂ ವಿಸ್ತೀರ್ಣ ವೇ ಇಲ್ಲದ ಪ್ರದೇಶವಾಗಿರುತ್ತದೆ, ರಸ್ತೆ , ನಿವೇಶನ, ಮೊದಲಾದ ವಿಷಯ ಗಳಲ್ಲಿ ಸರಳೀಕರಣಗೊಳಿಸಿ ಪ್ರಸ್ತಾವನೆ ಅಂಗೀಕರಿಸುವಂತೆ ಮನವಿಯಲ್ಲಿ ,ಆಗ್ರಹಿಸಲಾಗಿದೆ ಎಂದು ಮುಸ್ತಫ ತಿಳಿಸಿದರು. 2013 ಸುಳ್ಯದಲ್ಲಿ ಯೋಜನಾ ಪ್ರಾಧಿಕಾರದ ನಿಯಮ ಜಾರಿಗೆ ಬರುವುದಕ್ಕಿಂತ ಮುಂಚೆಯೇ ಭೂ ಪರಿವರ್ತನೆಗೊಂಡು ನಿರ್ಮಾಣಗೊಂಡ ಕಟ್ಟಡ ಮತ್ತು ನಿವೇಶನಗಳಿಗೆ ಪ್ರಾಧಿಕಾರದ ಅನುಮೋದನೆಗೆ 2013 ಕಟ್ ಆಫ್ ಡೇಟ್ ನಿಗದಿಪಡಿಸಿ ಆದೇಶ ಹೊರಡಸುವುದು ಸೇರಿದಂತೆ ಸುಳ್ಯ ನಗರ ಮಹಾಯೋಜನೆ ಸರಳೀಕರಣಗೊಳಿಸಿ ಅನುಮೋದನೆ ನೀಡುವಂತೆ, ಯೋಜನೆ ಅಂಗೀಕಾರಗೊಳ್ಳುವರೆಗೆ ನಗರ ಪಂಚಾಯತ್ ನಲ್ಲೇ ಪರವಾನಿಗೆ, ಖಾತೆ ನೀಡುವಂತೆ ಆಗ್ರಹ ಅನೇಕ ವಿಷಯಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಕೆ. ಎಂ. ಮುಸ್ತಫ ತಿಳಿಸಿದರು, ಈ ಬಗ್ಗೆ ಪ್ರತಿಕ್ರಿಯಿಸುರುವ ಸಚಿವರು ಸುಳ್ಯ ಬೆಳ್ತಂಗಡಿ ಸೇರಿದಂತೆ ಜಿಲ್ಲೆಯ ಹಲವು ನಗರ ಸ್ಥಳೀಯ ಸಂಸ್ಥೆ ಗಳಲ್ಲಿ ಈ ಸಮಸ್ಯೆಗಳಿದ್ದು ಈ ಬಗ್ಗೆ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬೆಳ್ತಂಗಡಿ, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ. ಕೃಷ್ಣಪ್ಪ, ಆದಂ ಕಡಬ, ಶವಾದ್ ಸುಳ್ಯ ಎನ್ ಎಸ್ ಯು ಐ ರಾಜ್ಯ ಕಾರ್ಯದರ್ಶಿ ಮೊದಲಾದವರು ಉಪಸ್ಥಿತರಿದ್ದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ