ದಕ್ಷಿಣ ಇರಾನ್‌ನಲ್ಲಿ ಶನಿವಾರ 6.3 ತೀವ್ರತೆಯ ಎರಡನೇ ತೀವ್ರವಾದ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ತಿಳಿಸಿದೆ. ಭೂಕಂಪವು 10 ಕಿಮೀ (6.21 ಮೈಲುಗಳು) ಆಳದಲ್ಲಿದೆ ಎಂದು EMSC ತಿಳಿಸಿದೆ. ಇದರ ಪರಿಣಾಮ ಬಹ್ರೇನ್, ಸೌದಿ ಅರೇಬಿಯಾ, ಇರಾನ್, ಓಮನ್, ಪಾಕಿಸ್ತಾನ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಅಫ್ಘಾನಿಸ್ತಾನದಲ್ಲಿ ಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದುವು ಇರಾನ್‌ನ ಹಾರ್ಮೋಜ್‌ಗಾನ್ ಪ್ರಾಂತ್ಯದ ಬಂದರ್ ಇ ಖಮೀರ್‌ನಿಂದ 36 ಕಿ.ಮೀ ದೂರದಲ್ಲಿ, ಸಮಯ 1:32AM ಹಾಗೂ ಎರಡನೇ ಬಾರಿ 3:24 AM ಗೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಯುಎಇಯಲ್ಲಿನ ಹೆಚ್ಚಿನ ಅನುಭವವಾಗಿದ್ದು ನಿವಾಸಿಗಳು ಬಲವಾದ ನಡುಕವನ್ನು ಅನುಭವಿಸಿದ್ದು ಆತಂಕದಿಂದ ತಮ್ಮ ನಿವಾಸಗಳಿಂದ ಹೊರಗೆ ಓಡಿ ಬಂದಿದ್ದಾರೆ. ಎಂದು ತಿಳಿದುಬಂದಿದೆ.

https://youtube.com/shorts/s5_Kk3_kLpo?feature=share

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ