ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ಇದರ ಆಂತರಿಕ ಗುಣಮಟ್ಟ ಖಾತರಿಕೋಶ ಮತ್ತು ರಾಜ್ಯಶಾಸ್ತ ವಿಭಾಗದ ವತಿಯಿಂದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಪ್ರಯುಕ್ತ ದಿನಾಂಕ.೨೪.೧೧.೨೦೨೩ನೇ ಶುಕ್ರವಾರ ಅಲ್ಪಸಂಖ್ಯಾತರ ಅಭಿವೃಧ್ಧಿಗಾಗಿ ಸರಕಾರ ರೂಪಿಸಿರುವ ಯೋಜನೆಗಳ ಬಗ್ಗೆ ಅರಿವನ್ನು ಮೂಡಿಸುವ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ.ಎA ಇವರು ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕರ‍್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿರುವ ಶ್ರೀಯುತ ಮಹಮ್ಮದ್ ಸದ್ದಾಂ, ಹಾಸ್ಟೆಲ್ ಮೇಲ್ವಿಚಾರಕರು ಬಿ.ಸಿ.ಡಬ್ಯು.ಡಿ ಸುಳ್ಯ ಇವರು ಸರಕಾರದ ವಿವಿಧ ಸೌಲಭ್ಯಗಳ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀಮತಿ. ರತ್ನಾವತಿ ಡಿ ಕರ‍್ಯಕ್ರಮಕ್ಕೆ ಶುಭಾಶಯಗಳನ್ನು ನುಡಿದರು. ರಾಜ್ಯಶಾಸ್ತ ವಿಭಾಗದÀ ಮುಖ್ಯಸ್ಥೆ ಡಾ. ಮಮತ ಕೆ ಕರ‍್ಯಕ್ರಮವನ್ನು ಆಯೋಜಿಸಿದರು. ಕೃಷ್ಣವೇಣಿ ಅಂತಿಮ ಬಿ.ಎ ಸರ್ವರನ್ನು ಕಾರ‍್ಯಕ್ರಮಕ್ಕೆ ಸ್ವಾಗತಿಸಿದರು. ಹರ್ಷಿತಾ ಅಂತಿಮ ಬಿ.ಎ ವಂದನಾರ್ಪಣೆಗೈದು, ಶ್ರೀಲಯ ಪ್ರಥಮ ಬಿ.ಎ ಪ್ರಾರ್ಥಿಸಿದರು ಮತ್ತು ಪರ್ಝನಾ ಅಂತಿಮ ಬಿ.ಎ ಕಾರ‍್ಯಕ್ರಮವನ್ನು ನಿರೂಪಿಸಿದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ