33 ವರ್ಷಗಳ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿದ ಮಂಗಳೂರು ವಿವಿ, ಫೈನಲ್ ನಲ್ಲಿ ಚೆನ್ನೈನ ವೇಲ್ಸ್ ವಿರುದ್ಧ ಹಣಾಹಣಿ

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ, ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ವತಿಯಿಂದ ನಡೆದ ಅಖಿಲ ಭಾರತ ಅಂತರ್‌ ವಿವಿ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಅತಿಥೇಯ ಮಂಗಳೂರು ವಿವಿ ತಂಡ ‌ ಚಾಂಪಿಯನ್ ಪಟ್ಟ ಅಲಂಕರಿಸಿಕೊಂಡಿದೆ. ಭಾನುವಾರ ಮುಂಜಾನೆ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಮಂಗಳೂರು ವಿವಿ ತಂಡವು ಚೌಧರಿ ಬನ್ಸಿಲಾಲ್ ತಂಡವನ್ನು 49-35 ಅಂಕಗಳಿಂದ ಮಣಿಸಿ ಫೈನಲ್‌ ಗೇರಿತು.

ಇನ್ನೊಂದು ಸೆಮಿಫೈನಲ್‌ ನಲ್ಲಿ ಚೆನ್ನೈನ ವೇಲ್ಸ್‌ ತಂಡ ಹರ್ಯಾಣದ ಮಹರ್ಷಿ ದಯಾನಂದ ವಿವಿಯನ್ನು ಸೋಲಿಸಿ ಫೈನಲ್‌ ಗೇರಿತು.ಇನ್ನು ಫೈನಲ್ ಹಣಾಹಣಿಯ ರೋಚಕ ಪಂದ್ಯದಲ್ಲಿ ಮಂಗಳೂರು ಯುನಿವರ್ಸಿಟಿ ತಂಡ ಚೆನ್ನೈ ವೇಲ್ಸ್ ತಂಡವನ್ನು ಸೋಲಿಸಿತು. ಮೂವತ್ತು ವರ್ಷಗಳ ಬಳಿಕ ಮತ್ತೊಮ್ಮೆ ಮಂಗಳೂರು ವಿವಿ ಪ್ರಶಸ್ತಿ ಗೆ ಮುತ್ತಿಟ್ಟು ಈ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿಕೊಂಡಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ