ಸುಳ್ಯದ ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರನ್ನು ಕಾಸರಗೋಡಿನ ಮುಳ್ಳೇರಿಯಾದ ಶ್ಕೀ ಧರ್ಮಶಾಸ್ತ್ರಾ ಭಜನಾ ಮಂದಿರ ದೇಲಂಪಾಡಿಯಲ್ಲಿ 18 ವರ್ಷಗಳ ಬಳಿಕ ನಡೆದ 4 ದಿನಗಳ ವಿಜೃಂಭಣೆಯ ಅಯ್ಸಪ್ಪನ ಉತ್ಸವ

“ಅಯ್ಯಪ್ಪ ತಿರುವಳಕ್ಕ್ ಮಹೋತ್ಸವ”ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಕೇರಳ, ಕಾಸರಗೋಡಿನ ಸುತ್ತ ಮುತ್ತಲ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಕ ಮೊದಲಾದ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ, ತರಬೇತುದಾರರಾಗಿ, ಪ್ರಧಾನ ಭಾಷಣಕಾರರಾಗಿ, ಭಾಗವಹಿಸುತ್ತಿರುವ ಡಾ. ಅನುರಾಧಾ ಕುರುಂಜಿಯವರನ್ನು ವಿಜಯಕುಮಾರ್ ನಾಯರ್ ಅವರು ಅಧ್ಯಕ್ಷತೆ ವಹಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಗೌರವಾನ್ವಿತ ಗಣ್ಯರು ಸಾವಿರಾರು ಭಗವದ್ಭಕ್ತರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ