ಕೌಲಾಲಂಪುರ್: ಪ್ರಧಾನಿ ಅನ್ವರ್ ಇಬ್ರಾಹಿಂ (Anwar Ibrahim) ನೇತೃತ್ವದ ಮಲೇಷ್ಯಾ (Malaysia) ಸರ್ಕಾರವು ಚೀನಾ (China) ಮತ್ತು ಭಾರತೀಯ (Indians) ನಾಗರಿಕರಿಗೆ ಪ್ರವೇಶ ವೀಸಾಗಳಿಗೆ ಸಂಬಂಧಿಸಿದಂತೆ ಮಹತ್ವದ ನೀತಿ ಬದಲಾವಣೆಯನ್ನು ಘೋಷಿಸಿದ್ದಾರೆ. ಮಲೇಷ್ಯಾ ಸರ್ಕಾರ ಇದೇ ಬರುತ್ತವೆ ಡಿಸೆಂಬರ್ 1ರಿಂದ 30 ದಿನಗಳವರೆಗೆ ವಾಸ್ತವ್ಯ ಹೂಡಲು ಚೀನಾ ಮತ್ತು ಭಾರತದ ನಾಗರಿಕರಿಗೆ ವೀಸಾಮುಕ್ತ ಪ್ರವೇಶವನ್ನು (Visa-Free Entry) ಘೋಷಿಸಿದೆ. ಪುತ್ರಜಯದಲ್ಲಿ ನಡೆದ ಪೀಪಲ್ಸ್ ಜಸ್ಟಿಸ್ ಪಾರ್ಟಿಯ ವಾರ್ಷಿಕ ಸಭೆಯಲ್ಲಿ ಭಾಷಣ ಮಾಡುವ ಸಂದರ್ಭ ಇಬ್ರಾಹಿಂ ಈ ಘೋಷಣೆ ಮಾಡಿದರು.

ಭಾರತೀಯ ಪ್ರಯಾಣಿಕರಿಗೆ ಏನು ಬದಲಾವಣೆ?
ವೀಸಾ ನಿರ್ಮೂಲನೆ: ಮಲೇಷ್ಯಾಕ್ಕೆ ಭೇಟಿ ನೀಡುವ ಭಾರತೀಯ ನಾಗರಿಕರಿಗೆ ಇನ್ನು ಮುಂದೆ ಡಿಸೆಂಬರ್ 1 ರಿಂದ ಪ್ರವೇಶ ವೀಸಾಗಳ ಅಗತ್ಯವಿಲ್ಲ.
ವೀಸಾ-ಮುಕ್ತ ವಾಸ್ತವ್ಯ: ಭಾರತೀಯರು ವೀಸಾ ಪಡೆಯದೆ 30 ದಿನಗಳವರೆಗೆ ಮಲೇಷ್ಯಾದಲ್ಲಿ ಉಳಿಯಬಹುದು.
ಭದ್ರತಾ ಸ್ಕ್ರೀನಿಂಗ್: ಮಲೇಷ್ಯಾಕ್ಕೆ ಭೇಟಿ ನೀಡುವ ಭಾರತೀಯ ಪ್ರಜೆಗಳಿಗೆ ಭದ್ರತಾ ಸ್ಕ್ರೀನಿಂಗ್ ಇರುತ್ತದೆ.

ಈ ಕ್ರಮ ಕೈಗೊಳ್ಳಲು ಕಾರಣವೇನು?
ವಿಶೇಷವಾಗಿ ಭಾರತ ಮತ್ತು ಚೀನಾದಿಂದ ಪ್ರವಾಸಿಗರು ಮತ್ತು ಹೂಡಿಕೆದಾರರ ಒಳಹರಿವನ್ನು ಮತ್ತಷ್ಟು ಉತ್ತೇಜಿಸಲು ಮುಂಬರುವ ವರ್ಷದಲ್ಲಿ ವೀಸಾ ಸೌಲಭ್ಯಗಳನ್ನು ಹೆಚ್ಚಿಸುವ ಯೋಜನೆಗಳನ್ನು ಪ್ರಧಾನಿ ಇಬ್ರಾಹಿಂ ಈ ಹಿಂದೆ ಬಹಿರಂಗಪಡಿಸಿದ್ದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ