ನವದೆಹಲಿ: ಮನೆ ಸ್ವಚ್ಛ ಮಾಡು ಅಂತ ಹೇಳಿದ್ದಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿದೆ. ಜಗಳ ತಾರಕ್ಕಕ್ಕೇರಿ ಆಕ್ರೋಶದಿಂದ ಹೆಂಡತಿ ತನ್ನ ಬಲ ಕಿವಿಯನ್ನು ಕಚ್ಚಿ ತುಂಡುಮಾಡಿರುವುದಾಗಿ ಪತಿ ಪೊಲೀಸ್‌ ಠಾಣೆ ಯಲ್ಲಿ ಕೇಸ್‌ ದಾಖಲಿಸಿರುವ ಘಟನೆ ದೆಹಲಿ ಸುಲ್ತಾನ್‌ಪುರಿ (Sultanpuri) ಪ್ರದೇಶದಲ್ಲಿ ನಡೆದಿದೆ.ಹೆಂಡತಿ ಕಿವಿ ಕಚ್ಚಿ ಎರಡು ತುಂಡಾಗಿದ್ದರಿಂದ 45 ವರ್ಷದ ಬಲಿಪಶು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು. ಸಂತ್ರಸ್ತ ಪತಿ ನೀಡಿದ ದೂರಿನ ಆಧಾರದ ಮೇಲೆ ಪತ್ನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪತ್ನಿ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ಗಾಯ ಉಂಟುಮಾಡುವುದು) ಅಡಿಯಲ್ಲಿ FIR ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.


ಇದೇ ತಿಂಗಳ ನವೆಂಬರ್‌ 20 ರಂದು ಬೆಳಗ್ಗೆ 9:20ರ ಸುಮಾರಿಗೆ ನನ್ನ ಹೆಂಡತಿಗೆ ಮನೆ ಸ್ವಚ್ಛಗೊಳಿಸುವಂತೆ ಹೇಳಿ, ಮನೆಯ ಹೊರಗೆ ಕಸ ಎಸೆಯಲು ಹೋಗಿದ್ದೆ. ನಾನು ಮನೆಗೆ ವಾಪಸ್‌ ಬಂದ ಕೂಡಲೇ ನನ್ನ ಹೆಂಡತಿ ಜಗಳ ತೆಗೆದಿದ್ದಾಳೆ. ಜಗಳದ ಮಧ್ಯೆ ಮಕ್ಕಳೊಂದಿಗೆ ಪ್ರತ್ಯೇಕವಾಗಿರಲು ಮನೆ ಮಾರಾಟ ಮಾಡಿ, ತನಗೂ ಪಾಲು ನೀಡುವಂತೆ ಪತ್ನಿ ಕೇಳಿದ್ದಾಳೆ. ಈ ವೇಳೆ ಪತಿ ಸಮಾಧಾನಪಡಿಸಿದರೂ ಬಗ್ಗದೇ ಮಾತಿನ ಚಕಮಕಿ ಮುಂದುವರಿದಿದೆ.

ಇದರಿಂದ ಆಕೆಯ ಕೋಪ ಮಿತಿಮೀರಿ ನನ್ನನ್ನೇ ಹೊಡೆಯಲು ಬಂದಿದ್ದಳು. ಆಕೆಯನ್ನು ತಳ್ಳಿ, ನಾನು ಮನೆಯಿಂದ ಹೊರಹೋಗುತ್ತಿದೆ. ಆಗ ಹಿಂಬದಿಯಿಂದ ನನ್ನನ್ನ ಹಿಡಿದುಕೊಂಡು ಬಲ ಕಿವಿಯನ್ನು ಕಚ್ಚಿದಳು. ನನ್ನ ಕಿವಿ ಮೇಲಿನ ಭಾಗ ತುಂಡಾಗಿ ರಕ್ತಸ್ರಾವವಾಯಿತು ಎಂದು ದೂರಿನಲ್ಲಿ ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ