ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ವತಿಯಿಂದ ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಗೊಂಡ ಹಿನ್ನಲೆಯಲ್ಲಿ, ಸಂಸ್ಥೆಯ ಪದಾಧಿಕಾರಿಗಳಿಗೆ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳಿಗೆ, ಆಡಳಿತ ಮಂಡಳಿ ಸದಸ್ಯರುಗಳಿಗೆ ಸಂತೋಷ ಕೂಟ ಸಮಾರಂಭ ಸ್ನೇಹ ಸಮ್ಮಿಲನ ಮಂಗಳೂರಿನ ಜಮೀಯ್ಯತುಲ್ ಫಲಾಹ್ ಸಭಾಭವನದಲ್ಲಿ ಜರಗಿತು.

ಈ ಸಂಧರ್ಭದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ಫರೀದ್ ರವರು ಮೀಫ್ ಸಹಕಾರಿಗಳನ್ನು ಸನ್ಮಾನಿಸಿದರು.ಮೀಫ್ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಉಮ್ಮರ್ ಟೀ ಕೇ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಮುಖ್ಯ ಅತಿಥಿ ಗಳಾಗಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ. ಎ. ಬಾವ, ಶ್ರೀಮತಿ ನಫೀಸಾ ಅಹಮದ್ ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್, ಬೆಂಗಳೂರು , ಜಮೀಯತುಲ್ ಫಲಾಹ್ ಅಧ್ಯಕ್ಷ ಕೆ. ಕೆ.ಶಾಹುಲ್ ಹಮೀದ್ ಭಾಗವಹಿಸಿದ್ದರು. ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಖಾಸಗಿ ಶಾಲೆಗಳ ಬೇಡಿಕೆಗಳ ಪಟ್ಟಿಯನ್ನು ವಾಚಿಸಿ ಸ್ಪೀಕರ್ ರವರಿಗೆ ಮನವಿ ಸಲ್ಲಿಸಿದರು ವೇದಿಕೆಯಲ್ಲಿ ಮೀಪ್ ಉಪಾಧ್ಯಕ್ಷರುಗಳಾದ ಮಮ್ತಾಜ್ ಅಲಿ ಕೃಷ್ಣಾಪುರ, ಶಾಬಿಹ್ ಅಹಮದ್ ಖಾಜಿ ಉಡುಪಿ ಖಜಾಂಚಿ ನಿಸಾರ್ ಮಹಮ್ಮದ್ , ಸೆಕ್ರೆಟರಿ ಪ್ರೋಗ್ರಾಂ ಸೆಕ್ರೆಟರಿ ಮಹಮ್ಮದ್ ಶಾರಿಕ್, ಮೀಡಿಯಾ ಸೆಕ್ರೆಟರಿ ಇಲ್ಯಾಸ್ ಪಣಂಬೂರು ಕಾರ್ಯದರ್ಶಿ ರಿಯಾಜ್ ಕಣ್ಣೂರು,ಮೊದಲಾದವರು ಉಪಸ್ಥಿತರಿದ್ದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ