ಬೆಂಗಳೂರು: ಹಸುಗೂಸುಗಳ ಮಾರಾಟ ಜಾಲವನ್ನು ಪತ್ತೆ ಮಾಡಿರುವ ಸಿಸಿಬಿ ಪೊಲೀಸರಿಗೆ (CCB Police) ಮತ್ತೊಂದು ಟಾಸ್ಕ್ ಶುರುವಾಗಿದೆ.. ಸದ್ಯ ಬಂಧಿತರಾಗಿರುವ ಆರೋಪಿಗಳೆಲ್ಲಾ ತಮಿಳುನಾಡು, ಆಂಧ್ರಪ್ರದೇಶದವರು ಅನ್ನೋದು ಬೆಳಕಿಗೆ ಬಂದಿವೆ.

ಕರ್ನಾಟದಲ್ಲಿ ಮಹಾಲಕ್ಷ್ಮೀ ಅನ್ನೋ ಮಹಿಳೆ ಇಲ್ಲಿ ಹಸುಗೂಸುಗಳನ್ನು ಖರೀದಿ ಮಾಡಿ ಬೇರೆ ಬೇರೆ ರಾಜ್ಯದವರಿಗೆ ₹ ಎಂಟರಿಂದ ಹತ್ತು ಲಕ್ಷದ ವರೆಗೆ ಹಣಕ್ಕೆ ಮಾರಾಟ ಮಾಡಿದ್ದಾಳೆ. ಇದರಲ್ಲಿ ಬಹುತೇಕ ಅರ್ಥಿಕವಾಗಿ ಕಷ್ಟದಲ್ಲಿರುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿದ್ದಾರೆ. ಇನ್ನೂ ಕೆಲವರು, ಮಕ್ಕಳು ಬೇಡ ಅಂತಾ ಅಬಾರ್ಷನ್‍ಗೆ ಬಂದವರನ್ನು ಕೂಡ ಮನವೊಲಿಸಿ ಕಂದಮ್ಮಗಳನ್ನು ತೆಗೆದುಕೊಂಡು ಲಕ್ಷ ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಈ ಪ್ರಕರಣದಲ್ಲಿ ಎಂಟು ಜನರ ಬಂಧನವಾಗಿದ್ದು, ಅವರ ಬ್ಯಾಂಕ್ ಡಿಟೇಲ್ಸ್ ಪರಿಶೀಲನೆ ಮಾಡಿದ ವೇಳೆ ಇವರೆಲ್ಲಾ ಕ್ಯಾಶ್ ಅಂಡ್ ಕ್ಯಾರಿ ವ್ಯವಹಾರ ಮಾಡಿರೋದು ಬೆಳಕಿಗೆ ಬಂದಿದೆ. ಆ ಹಿನ್ನೆಲೆಯಲ್ಲಿ ಅವರ ಮೊಬೈಲ್‍ಗಳ ಪರಿಶೀಲನೆ ನಡೆಸಿದ ವೇಳೆ ಒಂದಷ್ಟು ಇಂಟ್ರಸ್ಟಿಂಗ್ ವಿಚಾರಗಳು ಗೊತ್ತಾಗಿವೆ. ಹಸೂಗೂಸುಗಳ ಮಾರಾಟ ಜಾಲದಲ್ಲಿ ಯುವತಿಯರ ಅಂಡಾಣು ಖರೀದಿ ಕೂಡ ಮಾಡಲಾಗಿದೆ. ಈ ಪ್ರಕ್ರಿಯೆಗೆ ವೈದ್ಯರು ಮತ್ತು ಆಸ್ಪತ್ರೆಗಳ ಅವಶ್ಯತೆ ಇದ್ದು ಆ ವೈದ್ಯರು ಮತ್ತು ಆಸ್ಪತ್ರೆಗಳು ಯಾವುವು ಅನ್ನೋದು ತನಿಖೆ ನಡೆಸಬೇಕಿದೆ. ಜೊತೆಗೆ ಹಸುಗೂಸುಗಳನ್ನು ತೆಗೆದುಕೊಂಡವರಿಗೆ ನಿಜಕ್ಕೂ ಮಕ್ಕಳು ಇಲ್ದೇ ಖರೀದಿ ಮಾಡಿದ್ದಾರಾ..? ಅಥವಾ ಮಾಟ ಮಂತ್ರಕ್ಕಾಗಿ, ಭೀಕ್ಷಾಟನೆಗಾಗಿ ಬಳಸಿದ್ಧರಾ ಅನ್ನೊದು ಅನುಮಾನ ಅಧಿಕಾರಿಗಳಿಗೆ ಮೂಡಿದೆ. ನಗರದ ಸಿಗ್ನಲ್‍ಗಳಲ್ಲಿ ಎಳೆ ಮಕ್ಕಳನ್ನು ಇಟ್ಕೊಂಡು ಭೀಕ್ಷೆ ಬೀಡುವ ಮಹಿಳೆಯರು ಕೂಡ ಇಂತಹ ಕಂದಮ್ಮಗಳನ್ನು ಬಳಸಿರುವ ಶಂಕೆ ಇದೆ. ಸದ್ಯ ಅರವತ್ತು ಹಸುಗೂಸುಗಳನ್ನು ಮಾರಾಟ ಮಾಡಿರುವ ಬಗ್ಗೆ ಸಾಕ್ಷ್ಯಾಗಳು ಸಿಕ್ಕಿದ್ದು, ಅದರಲ್ಲಿ ಹತ್ತು ಮಕ್ಕಳ ಪೋಷಕರನ್ನು ಪತ್ತೆ ಮಾಡಲಾಗಿದೆ.. ಸಿಸಿಬಿ ಅಧಿಕಾರಿಗಳ ತನಿಖೆ ನಂತರವಷ್ಟೇ, ಹಸುಗೂಸುಗಳ ಹಿಂದಿನ ಕರಾಳ ಸತ್ಯ ಹೊರಬೀಳಬೇಕಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ