ಬರೋಬ್ಬರಿ ₹3.16 ಕೋಟಿ ಬಿಲ್ ಬಾಕಿ

ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟಿ20 ಪಂದ್ಯ ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಮೈದಾನದಲ್ಲಿ ನಡೆಯಲಿದೆ. ಆದರೆ ಈ ಮಹತ್ವದ ಪಂದ್ಯಕ್ಕೂ ಮುನ್ನ ಹೊಸ ತಲೆನೋವೊಂದು ಶುರವಾಗಿದ್ದು, ಎಲ್ಲರ ಚಿಂತೆಗೆ ಕಾರಣವಾಗಿದೆ.ಹೌದು, ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಕ್ರೀಡಾಂಗಣದ ಕೆಲವು ಭಾಗಗಳಲ್ಲಿ ವಿದ್ಯುತ್ ಇಲ್ಲ ಎಂಬ ಮಾಹಿತಿ ಅನೇಕ ರಾಷ್ಟ್ರೀಯ ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕಳೆದ 2009 ರಿಂದ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ಹೇಳಲಾಗುತ್ತಿದೆ. ಈಗಗಲೇ ಕ್ರೀಡಾಂಗಣ ಬರೋಬ್ಬರಿ ₹3.16 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ.

ಜೊತೆಗೆ ಕಳೆದ 5 ವರ್ಷಗಳ ಹಿಂದೆಯೇ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ವರದಿಯಾಗಿದೆ.ಆದರೆ, ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೋರಿಕೆಯ ಮೇರೆಗೆ ತಾತ್ಕಾಲಿಕ ಸಂಪರ್ಕ ನೀಡಲಾಗಿದ್ದು, ಇದು ಪ್ರೇಕ್ಷಕರ ಗ್ಯಾಲರಿಗಳಿಗೆ ಮಾತ್ರ ನೀಡಲಾಗುತ್ತದೆಯಂತೆ.

ಹೀಗಾಗಿ ಭಾರತ ಮತ್ತು ಆಸೀಸ್‌ ಪಂದ್ಯದ ವೇಳೆ ಫ್ಲಡ್‌ಲೈಟ್‌ಗಳಿಗಾಗಿ ಜನರೇಟರ್ ಬಳಸುವ ಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.ಇನ್ನು, ಬಾಕಿ ಉಳಿದಿದರುವ ವಿದ್ಯುತ್‌ ಬಿಲ್‌ ಪಾವತಿಗಾಗಿ ವಿದ್ಯುತ್ ಸರಬರಾಜು ಕಂಪನಿಯು PWD ಮತ್ತು ಕ್ರೀಡಾ ಇಲಾಖೆಗೆ ಹಲವು ಬಾರಿ ನೋಟಿಸ್ ಕಳುಹಿಸಿದರೂ ಯಾವುದೇ ಬಿಲ್‌ ಪಾವತಿ ಮಾಡಿಲ್ಲ ಎನ್ನಲಾಗಿದ್ದು, ಆದರೆ ಕಳೆದ 5 ವರ್ಷದಿಂದ ವಿದ್ಯುತ್‌ ಇಲ್ಲದೆಯೇ 3 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲಾಗಿದೆ.ವಿಶ್ವ ಕ್ರಿಕೆಟ್‌‌ನಲ್ಲಿ ಬಿಸಿಸಿಐ ಹಣಕಾಸಿನ ವಿಚಾರದಲ್ಲಿ ದೊಡ್ಡ ಕ್ರಿಕೆಟ್‌‌ ಸಂಸ್ಥೆಯಾಗಿದೆ. ಆದರೆ ಬಿಸಿಸಿಐ ಅಧೀನದಲ್ಲಿ ಬರುವಂತಹ ಈ ಮೈದಾನಗಳಲ್ಲಿ ಈ ರೀತಿಯ ಸಮಸ್ಯೆ ಇರುವುದು ದೊಡ್ಡ ಅಚ್ಚರಿಗೆ ಕಾರಣವಾಗಿದೆ. ಇಂದಿನ ಪಂದ್ಯ ಸಹ ಸಂಪೂರ್ಣ ಜನರೇಟರ್‌ ವಿದ್ಯುತ್‌ ಮೂಲಕ ನಡೆಯಲಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ