ತಿಂಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಲಂಡನ್‌ ನದಿಯಲ್ಲಿ ಶವವಾಗಿ ಪತ್ತೆ

ಲಂಡನ್: ಕಳೆದ ತಿಂಗಳು ಯುಕೆಯಲ್ಲಿ ನಾಪತ್ತೆಯಾಗಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿ ಲಂಡನ್‌ನ (London) ಥೇಮ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮಿತ್‌ಕುಮಾರ್ ಪಟೇಲ್ ಸೆಪ್ಟೆಂಬರ್‌ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಯುಕೆಗೆ ಆಗಮಿಸಿದ್ದು, ನವೆಂಬರ್ 17 ರಂದು ನಾಪತ್ತೆಯಾಗಿದ್ದ. ಮೆಟ್ರೋಪಾಲಿಟನ್ ಪೊಲೀಸರು ನವೆಂಬರ್ 21 ರಂದು ಪೂರ್ವ ಲಂಡನ್‌ನ ಕ್ಯಾನರಿ ವಾರ್ಫ್ ಪ್ರದೇಶದ ಬಳಿ ಥೇಮ್ಸ್ ನದಿಯಲ್ಲಿ ಈತನ ದೇಹವನ್ನು ಪತ್ತೆ ಮಾಡಿದ್ದಾರೆ. ಪಟೇಲ್‌ ರೈತ ಕುಟುಂಬಕ್ಕೆ ಸೇರಿದಾತ. ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ. ನವೆಂಬರ್ 17, 2023 ರಿಂದ ನಾಪತ್ತೆಯಾಗಿದ್ದ. ಈಗ ನವೆಂಬರ್ 21 ರಂದು ಪೊಲೀಸರು ಕ್ಯಾನರಿ ವಾರ್ಫ್‌ನಿಂದ ನೀರಿನಲ್ಲಿ ಆತನ ಮೃತದೇಹ ಹೊರತೆಗೆದಿದ್ದಾರೆ. ನಮ್ಮೆಲ್ಲರಿಗೂ ದುಃಖವಾಯಿತು. ಆದ್ದರಿಂದ, ನಾವು ಅವರ ಕುಟುಂಬಕ್ಕೆ ಸಹಾಯ ಮಾಡಲು ಮತ್ತು ಆತನ ದೇಹವನ್ನು ಭಾರತಕ್ಕೆ ಕಳುಹಿಸಲು ನಿಧಿ ಸಂಗ್ರಹಿಸಲು ನಿರ್ಧರಿಸಿದ್ದೇವೆ ಎಂದು ಸಂಬಂಧಿ ಪಾರ್ಥ್‌ ಪಟೇಲ್‌ ತಿಳಿಸಿದ್ದಾರೆ.

ಈವ್ನಿಂಗ್ ಸ್ಟ್ಯಾಂಡರ್ಡ್ ಪತ್ರಿಕೆಯ ಪ್ರಕಾರ, ವಿದ್ಯಾರ್ಥಿಯು ನವೆಂಬರ್ 20 ರಂದು ಶೆಫೀಲ್ಡ್ ಹಾಲಮ್ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾಭ್ಯಾಸ ಆರಂಭಿಸಿದ್ದ. ಜೊತೆಗೆ ಅಮೆಜಾನ್‌ನಲ್ಲಿ ಅರೆಕಾಲಿಕ ಉದ್ಯೋಗ ಪ್ರಾರಂಭಿಸುವ ಯೋಜಿಸಿದ್ದ.

namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Recent Posts

ಇನ್ನು ಮುಂದೆ ವ್ಯಾಟ್ಸ್ಆ್ಯಪ್ ಡಿಪಿ ಸ್ಕ್ರೀನ್‌ಶಾಟ್ ತೆಗೆಯಲು ಸಾಧ್ಯವಿಲ್ಲ, ಶೀಘ್ರದಲ್ಲೇ ಹೊಸ ಫೀಚರ್!

ವ್ಯಾಟ್ಸ್ಆ್ಯಪ್ ಸುರಕ್ಷತಾ ಫೀಚರ್ಸ್ ಮತ್ತಷ್ಟು ಬಿಗಿಗೊಳ್ಳುತ್ತಿದೆ. ಖಾಸಗಿತನಕ್ಕೆ ಧಕ್ಕೆಯಾಗುವುದನ್ನು ತಡೆಯಲು ವ್ಯಾಟ್ಸ್ಆ್ಯಪ್ ಇದೀಗ ಹೊಸ ಫೀಚರ್ ಪರಿಚಯಿಸುತ್ತಿದೆ. ಇನ್ನು ಮುಂದೆ…

57 mins ago

ಅರಂತೋಡು ಎಸ್ ಕೆಎಸ್ಎಸ್ಎಫ್ ಶಾಖೆ ವತಿಯಿಂದ ಮುಸಾಬಕ ಸಾಹಿತ್ಯ ಸ್ಪರ್ದೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ

ಇತ್ತೀಚೆಗೆ ಪುತ್ತೂರಿನ ಪರ್ಲಡ್ಕದಲ್ಲಿ ನಡೆದ ರಾಜ್ಯಮಟ್ಟದ ಮುಸಾಬಕ ಕಲಾ ಸಾಹಿತ್ಯೋತ್ಸವದಲ್ಲಿ ಜೂನಿಯರ್ ಆರೇಬಿಕ್ ಬರವಣಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು…

3 hours ago

ಸದರ್ನ್ ರೆಸಿಡೆನ್ಸಿಯಲ್ಲಿ ಇಸಾಕ್ ಎಂಬುವವರು ಆತ್ಮಹತ್ಯೆ .!

ಸುಳ್ಯ ಮಾ.೪: ಇಲ್ಲಿನ ಜೂನಿಯರ್ ಕಾಲೇಜು ರಸ್ತೆ ಬಳಿ ಇರುವ ಸದರ್ನ್ ರೆಸಿಡೆನ್ಸಿಯಲ್ಲಿ ಇಸಾಕ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ…

7 hours ago

ಅರಂತೋಡು: ಪಾದಚಾರಿಗೆ ಬೈಕ್ ಡಿಕ್ಕಿ; ಪಾದಚಾರಿಯ ಕಾಲಿಗೆ ಏಟು

ಅರಂತೋಡು ಮಸೀದಿ ಮುಂಭಾಗ ವ್ಯಕ್ತಿಯೊರ್ವರು ರಸ್ತೆ ದಾಟುತ್ತಿದ್ದ ವೇಳೆ, ಮುಖ್ಯ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಪಾದಾಚಾರಿಗೆ ಗಾಯವಾದ…

11 hours ago

ಎನ್ನೆಂಸಿಯ ಕನ್ನಡ ಭಾಷಾ ವಿದ್ಯಾರ್ಥಿಗಳಿಂದ ಬಂಟ್ವಾಳ ಕಂಬಳಕ್ಕೆ ಅಧ್ಯಯನ ಭೇಟಿ

ಬಂಟ್ವಾಳ:  ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಭಾಷೆಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಬಂಟ್ವಾಳ ಕಂಬಳಕ್ಕೆ ಅಧ್ಯಯನ ಭೇಟಿಗೆ ತೆರಳಿದ್ದರು.…

12 hours ago

ರಾಷ್ಟ್ರೀಯ ಸ್ಮಾರ್ಟ್ ಸ್ಕಾಲರ್ ಶಿಪ್ ಪರೀಕ್ಷೆ ಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಸುಳ್ಯದ ಮದರಸ ವಿದ್ಯಾರ್ಥಿ ಗಳಿಗೆ ಗಾಂಧಿನಗರ ಜಮಾಅತ್, ಮದರಸ ಸ್ಟಾಫ್ ಕೌನ್ಸಿಲ್ ವತಿಯಿಂದ ಅಭಿನಂದನಾ ಸಮಾರಂಭ

ರಾಷ್ಟ್ರೀಯ ಸ್ಮಾರ್ಟ್ ಸ್ಕಾಲರ್ ಶಿಪ್ ಪರೀಕ್ಷೆ ಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಸುಳ್ಯದ ಮದರಸ ವಿದ್ಯಾರ್ಥಿ ಗಳಿಗೆ ಗಾಂಧಿನಗರ ಜಮಾಅತ್,…

1 day ago