ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಪಲ್ಟಿಯಾಗಿ 13 ಮಂದಿ ಭಾರತೀಯರು ಸೇರಿದಂತೆ ಒಟ್ಟು 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ದೇಶದ ಕಡಲ ಭದ್ರತಾ ಕೇಂದ್ರ ಮಾಹಿತಿ ನೀಡಿದೆ.
ಟ್ಯಾಂಕರ್ ನಲ್ಲಿದ್ದವರೆಲ್ಲರು ನಾವತ್ತೆಯಾಗಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕೊಮೊರೊಸ್ ಧ್ವಜ ಇರುವ ತೈಲ ಟ್ಯಾಂಕರ್ ಪ್ರೆಸ್ಟೀಜ್ ಫಾಲ್ಕನ್ ಸಿಬ್ಬಂದಿಯಲ್ಲಿ 13 ಭಾರತೀಯರು ಮತ್ತು 3 ಮಂದಿ ಶ್ರೀಲಂಕಾದವರು ಇದ್ದರು. ಒಮಾನಿ ಬಂದರು ಡುಕ್ಮ್ ಬಳಿ ರಾಸ್ ಮದರಕಾದಿಂದ ಆಗ್ನೇಯಕ್ಕೆ 25 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಹಡಗು ಮುಳುಗಡೆಯಾಗಿದೆ.ಟ್ಯಾಂಕರ್ ಒಮಾನ್ ಬಂದರಿನ ಏಡೆನ್ಗೆ ತೆರಳುತ್ತಿತ್ತು. ತೈಲ ಟ್ಯಾಂಕರ್ ನೀರಿನಲ್ಲಿ ಮುಳುಗಡೆಯಾಗಿದ್ದು, ತಲೆಕೆಳಗಾಗಿ ಬಿದ್ದಿದೆ. ಆದರೆ ಹಡಗು ಸ್ಥಿರವಾಗಿದೆಯೇ ಅಥವಾ ಸಮುದ್ರಕ್ಕೆ ತೈಲ ಸೋರಿಕೆಯಾಗುತ್ತಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.