ಜು. 22ರಿಂದ ಮಂಗಳೂರು ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಹೆಚ್ಚುವರಿ ವಿಮಾನಗಳ ಹಾರಾಟ ಆರಂಭವಾಗಲಿದ್ದು, ಪ್ರತಿದಿನ ವಿಮಾನ ಹಾರಾಟ ನಡೆಸಲಿದೆ. ಸದ್ಯ ವಾರಕ್ಕೆ ನಾಲ್ಕು ದಿನ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಅಬುಧಾಬಿಗೆ ಸಂಚರಿಸುತ್ತಿದೆ. ಇದೀಗ ಜುಲೈ 22ರಿಂದ ಪ್ರತಿದಿನ ಹಾರಾಟ ನಡೆಸಲಿದೆ. ಜು. 22ರಂದು ರಾತ್ರಿ 8.15ಕ್ಕೆ ಮಂಗಳೂರಿನಿಂದ ಐಎಕ್ಸ್ 819 ವಿಮಾನ ಹೊರಡಲಿದೆ. ಇನ್ನು ಅಬುಧಾಬಿಯಿಂದ ಹೊರಡುವ ವಿಮಾನ ಬೆಳಗ್ಗೆ 5.20ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ.ಈಗಾಗಲೇ ಏರ್ ಇಂಡಿಯಾ ಎಕ್ಸ್ಪ್ರೆಸ್ 4 ವಿಮಾನಗಳು ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರದಂದು ಅಬುಧಾಬಿಗೆ ಸಂಚರಿಸುತ್ತಿವೆ. ಇದೀಗ ವಾರದ ಉಳಿದ ದಿನಗಳೂ ಹೊಸ ವಿಮಾನ ಸೇವೆ ಆರಂಭವಾಗಲಿದೆ.ಈ ನಡುವೆ ಇಂಡಿಗೋ ವಿಮಾನಯಾನ ಸಂಸ್ಥೆಯ ವಿಮಾನವು ಅಬುಧಾಬಿಗೆ ಆಗಸ್ಟ್ 9ರಿಂದ ಪ್ರತಿದಿನ ಹಾರಾಟ ನಡೆಸಲಿದೆ. ಅಬುಧಾಬಿಯಿಂದ ಸಂಜೆ 4ಕ್ಕೆ ಒಂದು ವಿಮಾನ ಮಂಗಳೂರಿನಲ್ಲಿ ಲ್ಯಾಂಡ್ ಆಗುತ್ತದೆ. ರಾತ್ರಿ 9.40ಕ್ಕೆ ಮತ್ತೊಂದು ವಿಮಾನ ಮಂಗಳೂರಿನಿಂದ ಹೊರಡಲಿದೆ.