ಸುಳ್ಯ: ಅಲ್ ಅಮೀನ್ ಯೂತ್ ಸೆಂಟರ್ (ರಿ)ಪೈಚಾರ್ ಸುಳ್ಯ ಇದರ ವತಿಯಿಂದ ಸಸಿ ವಿತರಣಾ ಕಾರ್ಯಕ್ರಮವು ಇಂದು ಪೈಚಾರಿನ ಬದ್ರಿಯ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಕುವ್ವತ್ತುಲ್ ಇಸ್ಲಾಂ ಮದರಸ ಸದರ್ ಮುಹಲ್ಲಿಮ್ ಮುಯ್ಯದ್ದೀನ್ ಲತೀಫಿಯವರು ದು‌ಅ ಮೂಲಕ ಚಾಲನೆಯನ್ನು ನೀಡಿದರು.ಸಸಿ ವಿತರಣೆಯನ್ನು ಸುಳ್ಯ ಪೋಲಿಸ್ ಠಾಣೆಯ ಉಪನಿರಿಕ್ಷರಾದ ದಿಲೀಪ್ ಜಿ ಆರ್ ಇವರು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಅಮೀನ್ ಯೂತ್ ಸೆಂಟರ್ ಇದರ ಅಧ್ಯಕ್ಷರಾದ ಅಬೂಸಾಲಿ ಪೈಚಾರ್ ವಹಿಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಾಲ್ಸುರು ಗ್ರಾಮ ಪಂಚಾಯತಿ ಸದಸ್ಯರಾದ ಮುಜೀಬ್ ಪೈಚಾರ್ ಇವರು ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡಿದರು.

https://youtu.be/dtqZSLSSm1o

ಈ ಸಂದರ್ಭದಲ್ಲಿ ಬದ್ರಿಯ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ರಝಾಕ್ ಅರ್ತಾಜೆ, ಪೀಸ್ ಸ್ಕೂಲ್ ಸ್ಥಾಪಕ ಅಧ್ಯಕ್ಷರಾದ ಅಬೂಬಕ್ಕರ್ ಬೊಳುಬೈಲು, ರಫೀಕ್ ಬೊಳುಬೈಲು, ಹಾಗೂ ಅಲ್ ಅಮೀನ್ ಯೂತ್‌ ಸೆಂಟರ್ ಇದರ ಸದಸ್ಯರುಗಳಾದ ಕರೀಮ್ ಪೈಚಾರ್, ಆಶ್ರಫ್ ಪೈಚಾರ್, ಆರ್ಷದ್ ಪ್ರಗತಿ, ಜುನೈದ್ ಪೈಚಾರ್, ಬದುರುದ್ದಿನ್ ಪಿಬಿ, ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಅಲ್ ಅಮೀನ್ ಯೂತ್‌ ಸೆಂಟರ್ ಪೈಚಾರ್ ‌ಇದರ ಪ್ರಧಾನ ಕಾರ್ಯದರ್ಶಿಗಳಾದ ಹನೀಫ್ ಪಿಕೆ ಸ್ವಾಗತಿಸಿ ‌ ವಂದಿಸಿದರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ