ಸಂಪಾಜೆ ಗ್ರಾಮಕ್ಕೆ ಭೂಕಂಪ ಅಧ್ಯಯನ ತಂಡ ಆಗಮನ ಕೇಂದ್ರ ಸರಕಾರದ ಭೂಕಂಪ ಇಲಾಖೆಯ ಮುಖ್ಯಸ್ಥರಾದ ಅಝದ್ ಅಹಮದ್ ಭಟ್, ಸೆಂಥಿಲ್ ,ಮಂಗಳೂರು ವಿಭಾಗದ ಭೂ ಗರ್ಭ ಇಲಾಖೆಯ ಮಹದೇವ್, ತಹಸೀಲ್ದಾರ್ ಅನಿತಾಲಕ್ಷ್ಮಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಮ್. ಶಾಹಿದ್ ತೆಕ್ಕಿಲ್, ಪಂಚಾಯತ್ ಸದಸ್ಯ ಎಸ್. ಕೆ. ಹನೀಫ್ ಸಂಪಾಜೆ, ಕಂದಾಯ ನಿರೀಕ್ಷೆಕರಾದ ಕೊರಗಪ್ಪ ಹೆಗ್ಡೆ, ಗ್ರಾಮ ಕರಣಿಕರಾದ ರಫೀಕ್ ಮುಲ್ಲಾ, ಕಾಂಗ್ರೇಸ್ ನಾಯಕ ರಹೀಮ್ ಬೀಜದಕಟ್ಟೆ, ಅಬ್ದುಲ್ ಖಾದರ್ ಮೊಟ್ಟೆಂಗಾರ್, ನಾರಾಯಣ ತಾಲೂಕು ಕಚೇರಿ, ಸಹಿತ ಇನ್ನಿತರ ಸರಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು. ಭೂಕಂಪ ಪೀಡಿತ ಪ್ರದೇಶಕ್ಕೆ ಹಾನಿಗೀಡಾದ ಮನೆಗಳಿಗೆ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲನೆ ಮಾಡಿ ಸ್ಥಳೀಯರಿಂದ ಮತ್ತು ಪಂಚಾಯತ್ ಮಾಜಿ ಸದಸ್ಯ ನಾಗೇಶ್ ಹಾಗೂ ಪಂಚಾಯತ್ ಸದಸ್ಯ ಅಬುಸಾಲಿ ಗೂನಡ್ಕ ರಿಂದ ಮಾಹಿತಿಯನ್ನು ತಿಳಿದುಕೊಂಡರು.
Advertisement
Advertisement