Advertisement
ಕೇರಳ ಮೂಲದ ಯುವಕನೊಬ್ಬ ಸರ್ವೀಸ್ ವ್ಯಾನಿನಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ತಮಾಷೆ ಮಾಡಿ, ವ್ಯಾನಿನಿಂದ ಇಳಿಸಿ ಧರ್ಮದೇಟು ತಿಂದ ಘಟನೆ ದುಗಲಡ್ಕದಲ್ಲಿ ವರದಿಯಾಗಿದೆ. ಸುಳ್ಯದಿಂದ ಗುತ್ತಿಗಾರು ಕಡೆಗೆ ಹೋಗುತ್ತಿದ್ದ ಸರ್ವಿಸ್ ವ್ಯಾನೋಂದರಲ್ಲಿ ಇದ್ದ ವಿದ್ಯಾರ್ಥಿನಿಯೊಬ್ಬಳಿಗೆ, ಪಾನಮತ್ತನಾದ ಕೇರಳ ಮೂಲದ ಯುವಕನೋರ್ವ ತಮಾಷೆ ಮಾಡುತ್ತಿದ್ದನೆಂದೂ, ಇದನ್ನು ಕಂಡ ಕೆಲವರು ಧರ್ಮದೇಟು ನೀಡಿದರೆಂದು ತಿಳಿದು ಬಂದಿದೆ. ಯುವಕ ನಾರ್ಣಕಜೆಯ ಬಳಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದನೆಂದು ತಿಳಿದು ಬಂದಿದೆ.
Advertisement