Advertisement

ಚಿಕ್ಕಬಳ್ಳಾಪುರ: 2021-22 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು) ಕ್ರೀಡಾಕೂಟವು ದಿನಾಂಕ ಜೂನ್ 27 ರಿಂದ 30 ರ ತನಕ ಚಿಕ್ಕಬಳ್ಳಾಪುರದ ಎಸ್.ಜೆ.ಸಿ.ಐ.ಟಿ. ಕಾಲೇಜಿನಲ್ಲಿ ನಡೆಯಿತು. 800 ಮೀಟರ್ ಓಟದಲ್ಲಿ , ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯ, ಸುಳ್ಯ ಇದರ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ತೃತೀಯ ವರ್ಷದ ವಿದ್ಯಾರ್ಥಿನಿ ಕುಮಾರಿ ಸವಿತಾ ಬಿ. ಹಾಗೂ 21 ಕಿ.ಮೀ ಹಾಫ್ ಮ್ಯಾರಥಾನ್ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್, ಪ್ರಥಮ ವರ್ಷದ ವಿದ್ಯಾರ್ಥಿ ತಿಶನ್ ಎ.ಎಂ. ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ‌.

ಇವರನ್ನು ಡಾ. ರೇಣುಕಾಪ್ರಸಾದ್ ಕೆ.ವಿ., ಪ್ರಧಾನ ಕಾರ್ಯದರ್ಶಿಗಳು ಎ.ಒ.ಎಲ್.ಇ(ರಿ), ಡಾ. ಉಜ್ವಲ್ ಯು.ಜೆ., ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು, ಪ್ರಾಂಶುಪಾಲರು ಡಾ. ಸುರೇಶ ವಿ., ಉಪಪ್ರಾಂಶುಪಾಲರು ಡಾ. ಶ್ರೀಧರ್ ಕೆ., ಡೀನ್ ಅಕಾಡೆಮಿಕ್ ಡಾ. ಉಮಾಶಂಕರ್ ಕೆ.ಎಸ್., ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಕುಸುಮಾಧರ ಎಸ್., ದೈಹಿಕ ಶಿಕ್ಷಕರಾದ ಭಾಸ್ಕರ್ ಎಸ್. ಬೇಲೆಗದ್ದೆ ಮತ್ತು ಕ್ರೀಡಾ ಚಟುವಟಿಕೆಗಳ ಮುಖ್ಯ ಸಂಯೋಜಕರಾದ ಪ್ರೊ. ಅಜಿತ್ ಬಿ.ಟಿ. ವಿದ್ಯಾರ್ಥಿಗಳನ್ನು ಅಭಿನ೦ದಿಸಿದ್ದಾರೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ