ಟೆಕ್ನೋ: ಮೆಟಾ-ಮಾಲೀಕತ್ವದ ಕೆಲವು ಇನ್ಸ್ಟಗ್ರಾಮ್ ಹಾಗೂ ಫೇಸ್ಬುಕ್ ಬಳಕೆದಾರರ ಮೆಸೆಂಜರ್ ಕೆಲ ಸಮಯ ಇಂದು ಡೌನ್ ಆಗಿದ್ದವು. ಪ್ರಪಂಚದಾದ್ಯಂತದ ಹಲವಾರು ಇನ್ಸ್ಟಾಗ್ರಾಮ್ ಬಳಕೆದಾರರು ತಮ್ಮ DM ಕಳುಹಿಸುವಾಗ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ. ಕೆಲವು ಬಳಕೆದಾರರು ಫೇಸ್‌ಬುಕ್ ಮೆಸೆಂಜರ್ ಅಪ್ಲಿಕೇಶನ್‌ನೊಂದಿಗೆ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್’ನಲ್ಲಿ ಸಂದೇಶಗಳನ್ನು ಕಳುಹಿಸಿದ ತಕ್ಷಣ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತಿದ್ದು, ಇನ್ನು ಕೆಲವು ಮೆಸೆಜ್ಗಳು ತೆರದು ನೋಡಿದರು, ನೋಡದೆ (unread) ತರಹ ಬರುತ್ತಿದ್ದಂತೆ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನ ಗ್ರಾಫ್‌ನಲ್ಲಿ ಪ್ರಸ್ತುತ ದೊಡ್ಡ ಜಿಗಿತವನ್ನು ತೋರಿಸುವ ಕಾರಣ ಡೌನ್‌ಡೆಕ್ಟರ್ ಸಹ ಸಮಸ್ಯೆಯನ್ನು ರೆಕಾರ್ಡ್ ಮಾಡಿದೆ. ವರದಿಯ ಪ್ರಕಾರ, ಪ್ರಪಂಚದಾದ್ಯಂತದ ಬಳಕೆದಾರರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅದರೊಂದಿಗೆ, ಸುಮಾರು 40% ಬಳಕೆದಾರರು ಇನ್ಸ್ಟಾಗ್ರಾಮ್ ನಲ್ಲಿ ಲಾಗಿನ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಅದರಲ್ಲಿ ಮುಖ್ಯವಾಗಿ ಮೆಸೇಜ್ಗಳಲ್ಲಿ ತುಂಬಾ ಸಮಸ್ಯೆಗಳು ಕಂಡು ಬಂದಿದ್ದವು ಎಂದು ತಿಳಿದು ಬಂದಿದೆ.
Advertisement
Advertisement