ಸುಳ್ಯ: ಇಲ್ಲಿನ ಕನಕಮಜಲು ಎಂಬಲ್ಲಿ ವ್ಯಕ್ತಿಯೋರ್ವನ ಕೈಯಲ್ಲಿ ಪಟಾಕಿ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡ ಘಟನೆ ಫೆ.20ರಂದು ಬೆಳಿಗ್ಗೆ ಸಂಭವಿಸಿದೆ.

ಕೈಯ ಬೆರಳುಗಳಿಗೆ ಗಂಭೀರವಾಗಿ ಗಾಯಗೊಂಡದ್ದಿರಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ಏಕಹಾ ಭಜನೆಯು ಜರುಗುತ್ತಿದ್ದು, ಕನಕಮಜಲು ಗ್ರಾಮದ ಗಬ್ಬಲಡ್ಕ ಪುರುಷೋತ್ತಮ ನಾಯ್ಕರ ಮಗ ಚಂದ್ರಶೇಖರ ಗಬ್ಬಲಡ್ಕ ಎಂಬವರು ಪಟಾಕಿಯೊಂದನ್ನು ಸಿಡಿಸುವ ವೇಳೆ ಕೈಯಲ್ಲೇ ಸ್ಪೋಟಗೊಂಡಿದ್ದು, ಗಂಭೀರವಾಗಿ ಗಾಯಗೊಂಡಿದೆ. ತಕ್ಷಣ ಸ್ಥಳೀಯರು ಸೇರಿ ಅವರನ್ನು ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ