ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಮತ್ತು ಸುಳ್ಯ ತಾಲೂಕಿನ ವಿವಿಧ ಇಲಾಖೆಗಳ ಹಾಗೂ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ದಿನಾಂಕ ೨೧ ಫೆಬ್ರವರಿ ೨೦೨೪ರಂದು ಕೆ.ವಿ.ಜಿ. ವೃತ್ತದ ಬಳಿಯಿಂದ ಆರಂಭಗೊAಡಿತು.
ಕೆ.ವಿ.ಜಿ. ವೃತ್ತದ ಬಳಿ ಆಗಮಿಸಿದ ಜಾಗೃತಿ ಜಾಥಾ ರಥದಲ್ಲಿದ್ದ ಡಾ/ ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯರಾದ ಡಾ. ರುದ್ರಕುಮಾರ್ ಎಂ.ಎA, ಪಿ.ಯು ವಿಭಾಗದ ಪ್ರಾಚಾರ್ಯರಾದ ಶ್ರೀಮತಿ. ಮಿಥಾಲಿ ಪಿ.ರೈ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಆ ಬಳಿಕ ಎನ್ನೆಂಸಿಯ ಎನ್.ಸಿ.ಸಿ ಬ್ಯಾಂಡ್ ಸೆಟ್, ರೆಡ್‌ಕ್ರಾಸ್, ಎನ್.ಎಸ್.ಎಸ್ ಮತ್ತು ರೋರ‍್ಸ್-ರೇಂರ‍್ಸ್ ಘಟಕದ ವಿದ್ಯಾರ್ಥಿಗಳು ಎನ್ನೆಂಪಿಯುಸಿ ಸುಳ್ಯ ಕೆ.ವಿ.ಜಿ ಕಾನೂನು ಕಾಲೇಜು, ಕೆ.ವಿ.ಜಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸ.ಪ್ರ.ದರ್ಜೆ ಕಾಲೇಜು ಸುಳ್ಯ ಇಲ್ಲಿನ ಬೋಧಕ-ಬೋಧಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು , ಸಮಾಜ ಕಲ್ಯಾಣ ಇಲಾಖೆಯ ಉದ್ಯೋಗಿಗಳು ಮೆರವಣಿಗೆಯ ಮೂಲಕ ಕಾಲೇಜಿಗೆ ಆಗಮಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯರಾದ ಡಾ. ರುದ್ರಕುಮಾರ್ ಎಂ.ಎA ಅವರು ವಹಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಬಾಲಚಂದ್ರ ಗೌಡ ಎಂ. ಅವರು ಡಾ/ ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಕೆ.ವಿ.ಜಿ ಕಾನೂನು ಕಾಲೇಜಿನ ಉಪನ್ಯಾಸಕಿ ಟೀನಾ ಹೆಚ್.ಎಸ್ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಕಛೇರಿ ಅಧೀಕ್ಷಕರಾದ ಡಾ. ಅರ್ಶಿಯ ಶುಭಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿಕ್ಷೇಮಾಪಾಲನಾಧಿಕಾರಿ ರತ್ನಾವತಿ ಡಿ, ಸ.ಪ್ರ.ದರ್ಜೆ ಕಾಲೇಜು ಸುಳ್ಯ ಇಲ್ಲಿನ ಅರ್ಥಶಾಸ್ತç ಪ್ರಾಧ್ಯಾಪಕರಾದ ಉದಯ ಶಂಕರ, ಕೆ.ವಿ.ಜಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಇಲ್ಲಿನ ಎನ್.ಎಸ್.ಎಸ್ ಅಧಿಕಾರಿ ಡಾ. ಪ್ರಮೋದ್, ಪಿ.ಯು ವಿಭಾಗದ ಪ್ರಾಚಾರ್ಯರಾದ ಮಿಥಾಲಿ ಪಿ.ರೈ ಉಪಸ್ಥಿತರಿದ್ದರು.


ಪ್ರಥಮ ಬಿ.ಎ ವಿದ್ಯಾರ್ಥಿನಿ ಕುಮಾರಿ. ಶ್ರೀಲಯ ಪ್ರಾರ್ಥಿಸಿ, ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯರಾದ ಡಾ. ರುದ್ರಕುಮಾರ್ ಎಂ.ಎA ಸ್ವಾಗತಿಸಿದರು. ಸ.ಪ್ರ.ದರ್ಜೆ ಕಾಲೇಜು ಸುಳ್ಯ ಇಲ್ಲಿನ ಅರ್ಥಶಾಸ್ತç ಪ್ರಾಧ್ಯಾಪಕರಾದ ಉದಯ ಶಂಕರ ಅವರು ವಂದಿಸಿದರು. ಕಾರ್ಯಕ್ರಮ ಸಂಯೋಜಕರಾದ ಕಾಲೇಜಿನ ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರು, ಐಕ್ಯೂಎಸಿ ಸಂಯೋಜಕರಾದ ಡಾ. ಮಮತಾ ಕೆ ಅವರು ಕಾರ್ಯಕ್ರಮ ನಿರೂಪಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ