ಸುಳ್ಯ: ಇಲ್ಲಿನ ಅರಂಬೂರು ಎಂಬಲ್ಲಿ ಬೈಕ್ -ಕಾರು-ಬಸ್ ನಡುವಿನ ಸರಣಿ ಅವಘಡದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಂಪಾಜೆ ಗ್ರಾಮದ ದೊಡ್ಡಡ್ಡ ನಿವಾಸಿ ಪರಮೇಶ್ವರ್ (49) ನಿಧನರಾಗಿದ್ದಾರೆ.

ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ಘಟನೆ ವಿವರ:

ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರೊಂದು ಅರಂಬೂರಿನ ಸಮೀಪ ಬರುತ್ತಿದ್ದಂತೆ ಹಠಾತ್ ಬ್ರೇಕ್ ಹಾಕಿದ್ದಲ್ಲದೆ ಇಡ್ಯಡ್ಕ ಕಡೆಗೆ ಕಾರನ್ನು ತಿರುಗಿಸಿದಾಗ ಆ ಕಾರಿನ ಹಿಂಬದಿಯಲ್ಲಿದ್ದ ಮತ್ತೊಂದು ಕಾರಿನ ಚಾಲಕ ದಿಢೀರ್ ಬ್ರೇಕ್ ಹಾಕಿದ್ದಾರೆ. ಈ ವೇಳೆ ಆ ಕಾರಿನ ಹಿಂದಿನಿಂದ ಬರುತ್ತಿದ್ದ ಸುಳ್ಯದಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಪರಮೇಶ್ವರ ಪೆರುಂಗೋಡಿ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಪರಮೇಶ್ವರ ಮೇಲೆ ಹರಿದಿದೆ. ಮಾತ್ರವಲ್ಲ ಅವರನ್ನು ಒಂದಷ್ಟು ದೂರು ಎಳೆದುಕೊಂಡು ಹೋಗಿದೆ. ಘಟನೆಯಿಂದ ಪರಮೇಶ್ವರ ತಲೆಗೆ ಗಂಭೀರ ಗಾಯವಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಕೂಡ ನಡೆಯಿತಾದರೂ ಅವರನ್ನು ಬದುಕಿಸುವ ಪ್ರಯತ್ನ ವಿಫಲವಾಯಿತು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ