ಸುಳ್ಯ: ಡಾ.ಉಮ್ಮರ್ ಬೀಜದಕಟ್ಟೆ ಯವರ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ವಿಶ್ವ ವೈದ್ಯರ ದಿನಾಚರಣೆ ಪ್ರಯುಕ್ತ ಸುಳ್ಯ ಸರಕಾರಿ ಆಸ್ಪತ್ರೆಯ ವೈದ್ಯಕೀಯ ಸೇವೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರಾದ ಡಾ.ಹಿಮಕರ ಹಾಗೂ ಸರ್ಜನ್ ಡಾ.ಹರೀಶ್‌ರವನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸುದ್ದಿ ಸಂಸ್ಥೆಯ ವ್ಯವಸ್ಥಾಪಕರಾದ ಯಶ್ವಿತ್ ಕಾಳಂಮನೆಯವರು ವಿವಿಧ ಕಾಯಿಲೆಯಿಂದ ನರಳುತ್ತಿರುವವರಿಗೆ ಉಪಚಾರ ನೀಡಿ ಗುಣಮುಖರಾಗಿಸುವ ವೈದ್ಯರೇ ನಿಜವಾದ ದೇವರು. ಅವರನ್ನು ಸಮಾಜ ಗೌರವದಿಂದ ಕಾಣುವಂತಾಗಬೇಕು ಎಂದು ಹೇಳಿದರು. ಬಳಿಕ ವೈದ್ಯರಿಗೆ ಶಾಲು ಹೊದೆಸಿ, ಫಲ ಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಜ್ಜನ ಪ್ರತಿಷ್ಠಾನ ನಿರ್ದೇಶಕರಾದ ಶರೀಫ್ ಜಟ್ಟಿಪಳ್ಳ, ಸುದ್ದಿ ಪತ್ರಿಕೆಯ ವರದಿಗಾರ ದಯಾನಂದ ಕೊರತ್ತೋಡಿ, ಸುದ್ದಿ ಚಾನೆಲ್‌ನ ನಿರೂಪಕಿ ಹಾಗೂ ಜಾಹೀರಾತು ವಿಭಾಗದ ಪೂಜಾಶ್ರೀ ವಿತೇಶ್ ಕೋಡಿ, ಪತ್ರಕರ್ತ ಗಿರೀಶ್ ಅಡ್ಪಂಗಾಯ ಉದ್ಯಮಿ ರಜಾಕ್ ಕೆ.ಎಂ ಜಟ್ಟಿಪಳ್ಳ ಉಪಸ್ಥಿತರಿದ್ದರು.