ಅರಂತೋಡು ಮಸೀದಿ ಮುಂಭಾಗ ವ್ಯಕ್ತಿಯೊರ್ವರು ರಸ್ತೆ ದಾಟುತ್ತಿದ್ದ ವೇಳೆ, ಮುಖ್ಯ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಪಾದಾಚಾರಿಗೆ ಗಾಯವಾದ ಘಟನೆ ಮಾರ್ಚ್ 4 ರಂದು ಬೆಳಿಗ್ಗೆ ಅರಂತೊಡಿನಲ್ಲಿ ವರದಿಯಾಗಿದೆ. ಮಡಿಕೇರಿಯಿಂದ ಸುಳ್ಯ ಕಡೆ ಬರುತ್ತಿದ್ದ ಬೈಕ್‌ ಅರಂತೋಡು ನಿವಾಸಿ ಹಮೀದ್ ಅವರಿಗೆ ಡಿಕ್ಕಿ ಹೊಡೆದಿದ್ದು ಘಟನೆಯಿಂದ ಹಮೀದ್ ರವರ ಕಾಲಿಗೆ ಗಾಯವಾಗಿದ್ದು ಸ್ಥಳೀಯರು ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ,ಡಿಕ್ಕಿಯಿಂದಾಗಿ ಬೈಕ್ ನ ಮುಂಭಾಗ ಕೂಡ ನಜ್ಜುಗುಜ್ಜಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ