ಸುಳ್ಯ ಮಾ.೪: ಇಲ್ಲಿನ ಜೂನಿಯರ್ ಕಾಲೇಜು ರಸ್ತೆ ಬಳಿ ಇರುವ ಸದರ್ನ್ ರೆಸಿಡೆನ್ಸಿಯಲ್ಲಿ ಇಸಾಕ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಇದೀಗ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಮಧ್ಯ ವಯಸ್ಕ ಪೈಚಾರ್ ಮೂಲದ ನಿವಾಸಿ ಇಸಾಕ್ ಎಂದು ಗುರುತಿಸಲಾಗಿದೆ. ಪೊಲೀಸರು ಇನ್ನಷ್ಟೆ ಸ್ಥಳಕ್ಕೆ ಆಗಮಿಸಬೇಕಿದೆ. ೨ ತಾರೀಖಿಗೆ ರೆಸಿಡೆನ್ಸಿಗೆ ಅವರು ಬಂದಿದ್ದರು. ಭಾನುವಾರ ಕೂಡ ಅವರು ಅಲ್ಲಿ ತೆರಳುತ್ತಿದ್ದುದ್ದನ್ನು ಜನ ನೋಡಿದ್ದಾರೆ. ಅವರ ಸಾವಿಗೆ ಕಾರಣ ಏನು ಅನ್ನುವುದು ಇನ್ನಷ್ಟೆ ತಿಳಿದು ಬರಬೇಕಿದೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ