ವ್ಯಾಟ್ಸ್ಆ್ಯಪ್ ಸುರಕ್ಷತಾ ಫೀಚರ್ಸ್ ಮತ್ತಷ್ಟು ಬಿಗಿಗೊಳ್ಳುತ್ತಿದೆ. ಖಾಸಗಿತನಕ್ಕೆ ಧಕ್ಕೆಯಾಗುವುದನ್ನು ತಡೆಯಲು ವ್ಯಾಟ್ಸ್ಆ್ಯಪ್ ಇದೀಗ ಹೊಸ ಫೀಚರ್ ಪರಿಚಯಿಸುತ್ತಿದೆ. ಇನ್ನು ಮುಂದೆ ವ್ಯಾಟ್ಸ್ಆ್ಯಪ್ ಪ್ರೊಫೈಲ್ ಪಿಕ್ಟರ್ ಸ್ಕ್ರೀನ್‌ಶಾಟ್ ತೆಗೆಯಲು ಸಾಧ್ಯವಿಲ್ಲ.

ವಾಟ್ಸಾಪ್ ಹೊಸ ಅಪ್ಡೇಟ್ video

ವ್ಯಾಟ್ಸ್ಆ್ಯಪ್ ಡಿಪಿಯನ್ನು ಸ್ಕ್ರೀನ್‌ಶಾಟ್ ತೆಗೆಯುವ ಅವಕಾಶಕ್ಕೆ ವ್ಯಾಟ್ಸ್ಆ್ಯಪ್ ಬ್ರೇಕ್ ಹಾಕಿದೆ. ಒಂದು ವೇಳೆ ಸ್ಕ್ರೀನ್‌ಶಾಟ್ ತೆಗೆಯುವ ಪ್ರಯತ್ನ ಮಾಡಿದರೆ, ಪಿಕ್ ಬ್ಲಾಕ್ ಮಾಡಲಾಗಿದೆ ಅನ್ನೋ ನೋಟಿಫಿಕೇಶನ್ ಬರಲಿದೆ. ಇಷ್ಟು ದಿನ ವ್ಯಾಟ್ಸ್ಆ್ಯಪ್ ಪ್ರೊಫೈಲ್ ಪಿಕ್ ಕ್ಲಿಕ್ ಮಾಡಿ, ಸ್ಕ್ರೀನ್‌ಶಾಟ್ ತೆಗೆದು ಇತರರಿಗೆ ಕಳುಹಿಸಲು ಸಾಧ್ಯವಾಗುತ್ತಿತ್ತು. ಇದರಿಂದ ಖಾಸಗಿತನಕ್ಕೆ ಧಕ್ಕೆಯಾಗುತ್ತಿತ್ತು. ಈ ಕುರಿತು ಹಲವು ದೂರುಗಳು ದಾಖಲಾಗಿತ್ತು. ಪ್ರೊಫೈಲ್ ಪಿಕ್ ದುರ್ಬಳಕೆ ಕುರಿತು ಹಲವು ದೂರುಗಳು ದಾಖಲಾಗಿತ್ತು. ಹೀಗಾಗಿ  ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗುವುದನ್ನು ತಪ್ಪಿಸಲು ವ್ಯಾಟ್ಸ್ಆ್ಯಪ್ ಹೊಸ ಫೀಚರ್ ಪರಿಚಯಿಸುತ್ತಿದೆ.

ವಾಟ್ಸಾಪ್ ಹೊಸ ಅಪ್ಡೇಟ್ video

2019ಕ್ಕೂ ಮೊದಲು ವ್ಯಾಟ್ಸ್ಆ್ಯಪ್ ಪ್ರೊಫೈಲ್ ಇಮೇಜ್ ನಿರ್ದಿಷ್ಟ ಖಾತೆಯ ಅನುಮತಿ ಮೇರೆ ಡೌನ್ಲೋಡ್ ಮಾಡುವ ಅವಕಾಶವಿತ್ತು. ಆದರೆ 2019ರಲ್ಲಿ ಪ್ರೊಫೈಲ್ ಪಿಕ್ಚರ್ ಡೌನ್ಲೋಡ್ ನಿರ್ಬಂಧಿಸಿತು.  ಯಾರ ಅನುಮತಿಯೂ ಇಲ್ಲದೆ ಯಾವುದೇ ವ್ಯಾಟ್ಸ್ಆ್ಯಪ್ ಖಾತೆಯ ಪ್ರೊಫೈಲ್ ಇಮೇಜ್ ಸ್ಕ್ರೀನ್‌ಶಾಟ್ ತೆಗೆಯಲು ಸಾಧ್ಯವಾಗುತ್ತಿತ್ತು. ಆದರೆ ಹೊಸ ಫೀಚರ್‌‌ನಲ್ಲಿ ಈ ಸ್ಕ್ರೀನ್‌ಶಾಟ್‌ಗೆ ನಿರ್ಬಂಧ ವಿಧಿಸಲಾಗಿದೆ. ಸದ್ಯ ಹೊಸ ಫೀಚರ್ ವ್ಯಾಟ್ಸ್ಆ್ಯಪ್ ಬೀಟಾ ವರ್ಶನ್ ‌ನಲ್ಲಿ ಪರಿಚಯಿಸಲಾಗಿದೆ.ಶೀಘ್ರದಲ್ಲೇ ಎಲ್ಲಾ ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಈ ಪ್ರೈವೈಸಿ ಫೀಚರ್ ಲಭ್ಯವಾಗಲಿದೆ. ಇದರ ಜೊತೆಗೆ ವ್ಯಾಟ್ಸ್ಆ್ಯಪ್ ತಮ್ಮ ಯೂಸರ್ ನೇಮ್ ಬದಲಿಸಲು, ಹೊಸ ಹೆಸರು ಸೂಚಿಸಲು ಅವಕಾಶ ನೀಡುತ್ತಿದೆ. ಇಷ್ಟೇ ಅಲ್ಲ ಮೊಬೈಲ್ ಸಂಖ್ಯೆಯನ್ನು ಗೌಪ್ಯವಾಗಿಡುವ ಫೀಚರ್ ಕೂಡ ಶೀಘ್ರದಲ್ಲೇ ಪರಿಚಯಿಸಲಿದೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ