Advertisement
ಮುಸಲ್ಮಾನ ಬಾಂಧವರ ಬಕ್ರೀದ್ ಹಬ್ಬದ ಈದ್ ನಮಾಜು ಪೈಚಾರಿನಲ್ಲಿ ನೆರವೇರಿತು.


ನಮಾಜ್ ನೇತೃತ್ವವನ್ನು ಮುನೀರ್ ಸಖಾಫಿ ವಹಿಸಿದರು. ಈದ್ ಸಂದೇಶವಾಗಿ ಬದ್ರಿಯಾ ಜುಮ್ಮಾ ಮಸೀದಿ ಪೈಚಾರ್ ಇದರ ಖತೀಬ್ ಮುನೀರ್ ಸಖಾಫಿ ಮಾತನಾಡಿ ಕುಟುಂಬ ಬಾಂಧವ್ಯವನ್ನು ಬೆಳಸಬೇಕು, ಪರಸ್ಪರ ಸ್ನೇಹಮಯ ಜೀವನವನ್ನು ಸಾಗಿಸಬೇಕು, ಮಾತಪಿತ ರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು. ಜಮಾತ್ ಅಧ್ಯಕ್ಷ ಅಬ್ಬಾಸ್, ಪದಾಧಿಕಾರಿಗಳು, ಸದಸ್ಯರು, ಜಮಾತಿನ ನೂರಾರು ಮಂದಿ ಮುಸಲ್ಮಾನ ಬಾಂಧವರು ಪಾಲ್ಗೊಂಡಿದ್ದರು.
Advertisement