ಎಲಿಮಲೆ-ಅರಂತೋಡು ರಸ್ತೆ ದುರಸ್ತಿಗೆ ಆಗ್ರಹಿಸಿ, ಚುನಾವಣಾ ಬಹಿಷ್ಕಾರ ಬ್ಯಾನರ್ ಗಳನ್ನು ಅಳವಡಿಸಿ ಗ್ರಾಮಸ್ಥರು ಅದರ ಮೂಲಕ ಪ್ರತಿಭಟಿಸಿದ್ದರು. ಆದರೆ ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಆಗಮನದ ಮುನ್ನಾ ದಿನ ಕೆಲ ಕಿಡಿಗೇಡಿಗಳು ಬ್ಯಾನರ್ ಗಳನ್ನು ತೆಗೆದು ಹೊಳೆಯಲ್ಲಿ ಎಸೆದಿದ್ದರು. ಇದೀಗ ಈ ಬ್ಯಾನರ್ ಹೋರಾಟದ ಕಾವು ಹೆಚ್ಚಿದ್ದು, ಜನರೆಲ್ಲಾ ಒಂದಾಗಿ ಊರಿನ ದೈವದ ಮುಂದೆ ಬಂದು ಪ್ರಾರ್ಥನೆ ಮಾಡಿದ್ದಾರೆ. ಬ್ಯಾನರ್ ತೆಗೆದ ಆ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು ಹಾಗೂ ನಮ್ಮ ರಸ್ತೆ ಅಭಿವೃದ್ಧಿಗೆ ಆದಷ್ಟು ಬೇಗ ಕಾಲ ಕೂಡಿಬರಬೇಕು ಎಂದು ದೈವದ ಮುಂದೆ ಪ್ರಾರ್ಥನೆ ಕೂಡಾ ಮಾಡಲಾಯಿತು. ಮುಖ್ಯಮಂತ್ರಿಗಳ ಆಗಮನದ ಮುನ್ನಾ ದಿನ ಬಹಿಷ್ಕಾರದ ಬ್ಯಾನರ್ ಅಕ್ರಮವಾಗಿ ತೆಗೆದು ಹೊಳೆಯಲ್ಲಿ ಎಸೆದಿದ್ದರು. ಆದರೆ ಹೋರಾಟಗಾರರು, ಬ್ಯಾನರ್ ಅಳವಡಿಸಿ ಕೊಡಿ ಎಂದು ಕಿಡಿಗೇಡಿಗಳಿಗೆ ನೀಡಿದ ಸಮಯ ಮುಗಿದಿರುವುದರಿಂದ ಹಾಗೂ ಯಾವ ವ್ಯಕ್ತಿಯೂ ಈ ಬಗ್ಗೆ ತಪ್ಪು ಒಪ್ಪಿಕೊಂಡು ಬ್ಯಾನರ್ ಗಳನ್ನು ಆಳವಡಿಸಿಲ್ಲ ಆದ್ದರಿಂದ ಊರಿನ ಸರ್ವ ನಾಗರಿಕರು ಸೇರಿಕೊಂಡು ಊರಿನ ದೈವಸ್ಥಾನವಾದ ಶ್ರೀ ಉಳ್ಳಾಕುಲು ದೈವಸ್ಥಾನ ಅಡ್ತಲೆ ಇಲ್ಲಿ ಬ್ಯಾನರ್ ತೆಗೆದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಮತ್ತು ನಮ್ಮ ರಸ್ತೆ ಅಭಿವೃದ್ಧಿಗೆ ಆದಷ್ಟು ಬೇಗ ಕಾಲ ಕೂಡಿಬರಬೇಕು ಎಂದು ಪ್ರಾರ್ಥನೆ ಮಾಡಿದರು.
Advertisement
Advertisement