ಬಾಲಿವುಡ್ ನಟ ಶಾರುಖ್ ಖಾನ್ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಫ್ರಾನ್ಸ್ನಲ್ಲೂ ಶಾರುಖ್ ಅವರ ಸಾಕಷ್ಟು ಅಭಿಮಾನಿಗಳಿದ್ದಾರೆ. ಅಂದ ಹಾಗೆ ಇದೀಗ ಫ್ರಾನ್ಸ್ ನಟ ಶಾರುಖ್ ಖಾನ್ ಗೆ ವಿಶೇಷ ಗೌರವ ನೀಡಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ನ ಗ್ರೇವಿನ್ ಮ್ಯೂಸಿಯಂನಲ್ಲಿ ಹೊಸ ಬಂಗಾರದ ನಾಣ್ಯವನ್ನು ಬಿಡುಗಡೆ ಮಾಡಲಾಗಿದೆ.

ಅದರ ಮೇಲೆ ಶಾರುಖ್ ಖಾನ್ ಅವರ ಚಿತ್ರ ಹಾಗೂ ಹೆಸರನ್ನು ಮುದ್ರಿಸಲಾಗಿದೆ.

ಪ್ರಸಿದ್ಧ ಗ್ರೆವಿನ್ ಸಂಗ್ರಹಾಲಯದಲ್ಲಿ ಅನೇಕ ಸೆಲೆಬ್ರಿಟಿಗಳ ಮೇಣದ ಪ್ರತಿಮೆ ಇದೆ. ಶಾರುಖ್ ಖಾನ್ ಅವರ ಮೇಣದ ಪ್ರತಿಮೆ ಕೂಡ ಇಲ್ಲಿದೆ. ಅದರ ಜೊತೆಗೆ ಬಂಗಾರದ ನಾಣ್ಯವನ್ನು ಕೂಡ ಬಿಡುಗಡೆ ಮಾಡುವ ಮೂಲಕ ಶಾರುಖ್ ಖಾನ್ಗೆ ಗೌರವ ಸಲ್ಲಿಸಲಾಗಿದೆ. ಈ ಗೌರವ ಪಡೆದ ಭಾರತದ ಮೊದಲ ನಟ ಎಂಬ ಖ್ಯಾತಿಗೆ ಶಾರುಖ್ ಖಾನ್ ಪಾತ್ರರಾಗಿದ್ದಾರೆ. ಅಲ್ಲದೇ, ಮಹಾತ್ಮ ಗಾಂಧಿ ಬಳಿಕ ಈ ಗೌರವ ಪಡೆದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಚಿತ್ರರಂಗದಲ್ಲಿ ಮೂರು ದಶಕಗಳಿಗೂ ಅಧಿಕ ಅನುಭವ ಹೊಂದಿರುವ ಶಾರುಖ್ ಖಾನ್ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಕೂಡ ಅವರು ಪಡೆದುಕೊಂಡಿದ್ದಾರೆ. ಇಂದಿಗೂ ಅವರಿಗೆ ಸಖತ್ ಬೇಡಿಕೆ ಇದೆ. ಅವರನ್ನು ನೋಡಲು ಮುಂಬೈನ ನಿವಾಸದ ಎದುರ ವಿದೇಶಿ ಪ್ರಜೆಗಳು ಕೂಡ ಬರುತ್ತಾರೆ ಎಂಬುದು ಗಮನಾರ್ಹ ಸಂಗತಿ. ದೇಶ, ವಿದೇಶದಲ್ಲೂ ಶಾರುಖ್ ಖಾನ್ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ.

Leave a Reply

Your email address will not be published. Required fields are marked *