Advertisement
ಸುಳ್ಯ: ಮಧ್ಯಾಹ್ನ ಎರಡು ಗಂಟೆಯ ಸಮಯದಲ್ಲಿ ಕೆಲವು ಹಿಂದೂ ಸಂಘಟನೆಗಳ ಯುವಕರ ತಂಡ ಗುತ್ತಿಗಾರು ಕೆನರಾ ಬ್ಯಾಂಕ್ ಬಳಿ ಇರುವ ನ್ಯೂ ಸ್ಟಾರ್ ಬೇಕರಿ ಬಳಿ ತೆರಳಿ ಬೇಕರಿ ಮಾಲಕ ಬಶೀರ್ ರವರಿಗೆ ಅಂಗಡಿ ಬಂದ್ ಮಾಡಲು ಸೂಚಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಬಶೀರ್’ವರು ಅಂಗಡಿ ಶಟರ್ ಮುಚ್ಚುವ ಸಂದರ್ಭದಲ್ಲಿ, ಬಂದವರ ಪೈಕಿ ಬಶೀರ್ ರವರ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಸಂದರ್ಭದಲ್ಲಿ ಅವರ ತಲೆ ತಿರುಗಿ ಅಸ್ವಸ್ಥರಾಗಿ ಅಲ್ಲಿಂದ ತಪ್ಪಿಸಿ ಜೀವಭಯದಿಂದ ಓಡಿ ಗುತ್ತಿಗಾರು ಮಸೀದಿ ಬಳಿ ಬಿದ್ದಿದ್ದು, ಇದನ್ನು ನೋಡಿದ ಸ್ಥಳೀಯರು ಬಂದು ತಲೆಯಿಂದ ರಕ್ತ ಸೋರುತಿರುವುದನ್ನು ಕಂಡು ಪ್ರಥಮ ಚಿಕಿತ್ಸೆ ನೀಡಿ ತದನಂತರ ಆಂಬುಲೆನ್ಸ್ ಮೂಲಕ ಸುಳ್ಯ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
Advertisement