Advertisement
ಬೆಂಗಳೂರು: ಕರಾವಳಿಯಲ್ಲಿ ಇತ್ತೀಚೆಗೆ ಬರ್ಬರ ಮೂರು ಹತ್ಯೆಯಾಗಿದ್ದು, ಈ ಪೈಕಿ ಪ್ರವೀಣ್ ನೆಟ್ಟಾರು ಮನೆಗೆ ಸಿಂಎಂ ಭೇಟಿ ನೀಡಿ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಬೆಳ್ಳಾರೆಯ ಮಸೂದ್ ಮತ್ತು ಸುರತ್ಕಲ್ ನ ಫಾಝಿಲ್ ನಿವಾಸಗಳಿಗೆ ಆದಷ್ಟು ಬೇಗ ಭೇಟಿ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೂದ್ ಹಾಗೂ ಫಾಝೀಲ್ ಮನೆಗೆ ಸಿಎಂ ಭೇಟಿ ನೀಡುತ್ತೇನೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಪ್ರಗತಿಯ ಹಂತದಲ್ಲಿದೆ. ಆದಷ್ಟು ಬೇಗನೇ ಕೊಲೆಗಡುಕರ ಪತ್ತೆಯಾಗಲಿದೆ. ಇನ್ನೊಂದೆರಡು ಮೂರು ದಿನಗಳಲ್ಲಿ ಪ್ರಕರಣವನ್ನು ಎನ್ ಐಎ ಗೆ ವರ್ಗಾವಣೆ ಕೂಡ ಮಾಡಲಿದ್ದೇವೆ ಎಂದಿದ್ದಾರೆ.
Advertisement