Advertisement
ಸುಬ್ರಹ್ಮಣ್ಯದ ಕುಮಾರಧಾರ ಬಳಿಯಲ್ಲಿರುವ ಗುಡ್ಡ ಜರಿದು ಮನೆಯೊಂದು ಕುಸಿದು ಬಿದ್ದಿದ್ದು ಮನೆಯೊಳಗಿದ್ದ ಇಬ್ಬರು ಮಕ್ಕಳು ಮಣ್ಣಲ್ಲಿ ಹೂತ ಘಟನೆ ವರದಿಯಾಗಿದೆ.
ಕುಸುಮಾಧರ ಎಂಬವರ ಮನೆ ಕುಸಿತಗೊಂಡಿದ್ದು ಅವರ ಇಬ್ಬರು ಹೆಣ್ಣುಮಕ್ಕಳು ಮಣ್ಣುಪಾಲಾಗಿದ್ದಾರೆ. ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಧಾವಿಸಿದ್ದಾರೆ. ಜೇಸಿಬಿ ಕಾರ್ಯಾರಂಭಿಸಿದೆ. ಮೃತದೇಹಗಳನ್ನು ಹೊರತೆಗೆಯುವ ಪ್ರಯತ್ನ ನಡೆಸಲಾಗಿದೆ. ಆದರೆ ಕುಮಾರಧಾರಾದಿಂದ ಪಂಜ ಕಡೆಗೆ ಹೋಗುವ ರಸ್ತೆ ನೆರೆ ನೀರಲ್ಲಿ ಪೂರ್ಣ ಮುಳುಗಿರುವುದರಿಂದ ಮತ್ತು ಮರ ಕೂಡ ಬಿದ್ದಿರುವುದರಿಂದ ರಸ್ತೆ ಬಂದ್ ಆಗಿದ್ದು ಪರಿಹಾರ ಕಾರ್ಯಕ್ಕೆ ಅಡ್ಡಿಯಾಗಿದೆ.
Advertisement