Advertisement

ಸುಳ್ಯ: ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಯಶ್ವಿನಿ ನದಿಯು ಉಕ್ಕಿ ಹರಿದು ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ಕಾರಣ ಮಾಣಿ-ಮೈಸೂರು ಮುಖ್ಯ ಸಂಪರ್ಕ ಹೈವೆ ಬಂದ್ ಆಗಿದೆ. ಸುಳ್ಯ ನಗರ ಸಮೀಪ ಅರಂಬೂರು, ಪಾಲಡ್ಕ ಭಾಗದಲ್ಲಿ ರಸ್ತೆಯ ಮೇಲೆ ನೀರು ತುಂಬಿದ್ದು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು ಜನಜೀವನ ಅಸ್ಥವ್ಯಸ್ಥಗೊಂಡಿದೆ.

ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಕೀ.ಮೀಗಟ್ಟಲೆ ಸಾಲುಗಟ್ಟಿ ನಿಂತಿದೆ. ಪಯಸ್ವಿನಿ ನದಿಯ ಬದಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಭಾರೀ ಪ್ರಮಾಣದಲ್ಲಿ ನೀರು ತುಂಬಿದೆ. ಪಯಸ್ವಿನಿ ನದಿ ತುಂಬಿ ಹರಿದ ಕಾರಣ ನಿನ್ನೆ ರಾತ್ರಿಯಿಂದ ಹಲವು ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ನೀರು ನುಗ್ಗಿದ್ದು ಸಂಚಾರಕ್ಕೆ ತಡೆ ಉಂಟಾಗಿದೆ. ರಾತ್ರಿಯಿಂದ ರಸ್ತೆ ಬಂದ್ ಆಗಿದ್ದು 6-7 ಗಂಟೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಸ್ಥಳೀಯರನ್ನು ಬೋಟಿನ‌ ಮೂಲಕ ದಡ ಸೇರಿಸುವ ಕಾರ್ಯವಾಗಿದ್ದವು,

ನೀರಿನ ಮಟ್ಟ ಕಡಿಮೆ.!

ನೀರಿನ ಮಟ್ಟ ಸ್ವಲ್ಪ ಕಮ್ಮಿಯಾಗುತ್ತಿದ್ದು ವಾಹನಗಳ ಸಂಚಾರ ಯತಾಸ್ಥಿತಿಗೆ ಮರಳಿವೆ

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ