ಅರಂತೋಡು: ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿರುವ ಹೋಟೆಲ್ ಮುಂಭಾಗ ಲಾರಿ ಹಿಂದುಗಡೆ ತೆಗೆಯುವಾಗ ತಡೆಗೋಡೆಗೆ ಗುದ್ದಿ ಪಕ್ಕದಲ್ಲಿ ಇದ್ದ ಪಾನ್ ಸ್ಟಾಲ್ ಗೆ ಗುದ್ದಿ ಹಾನಿಯಾದ ಘಟನೆ ಅರಂತೋಡಿನಲ್ಲಿ ವರದಿಯಾಗಿದೆ.
ಲಾರಿ ಚಾಲಕ ರಾತ್ರಿ ಸುಳ್ಯದಲ್ಲಿ ಮೊಬೈಲ್ ಪೋನ್ ಬಿಟ್ಟು ಬಂದು ಅವರಿಗೆ ಅರಂತೋಡು ತಲುಪುವಾಗ ನೆನಪು ಬಂದು ಲಾರಿಯನ್ನು ತೆಕ್ಕಿಲ್ ಕಾಂಪ್ಲೆಕ್ಸ್ ಮುಂಭಾಗ ಹಿಂದುಗಡೆ ತೆಗೆಯುವಾಗ ತಡೆಗೋಡೆಗೆ ಗುದ್ದಿತೆನ್ನಲಾಗಿದೆ. ಹೋಟೆಲ್ ಬೋರ್ಡ್, ಪಂಚಾಯತ್ ಕಸದ ತೊಟ್ಟಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ವರದಿ: ತಾಜುದ್ದೀನ್ ಅರಂತೋಡು