Advertisement
ನಿರಂತರ ವರುಣ ಆರ್ಭಟದಿಂದಾಗಿ ಸಂಪಾಜೆ ಗ್ರಾಮದ ಪೇರಡ್ಕ ಸೇತುವೆ ಸತತ ಮೂರನೇ ದಿನವೂ ಮುಳುಗಡೆಗೊಂಡಿದೆ. ದರ್ಕಾಸ್ ನಲ್ಲಿ ರಸ್ತೆ ಮೇಲೆ 12 ಗಂಟೆಗೂ ಅಧಿಕ ಸಮಯದಿಂದ ನೀರು ತುಂಬಿ ಸಂಚಾರಕ್ಕೆ ದಾರಿ ಇಲ್ಲದೆ ಇದೀಗ ಪೇರಡ್ಕ ದ್ವೀಪದಂತಾಗಿದೆ. ಇನ್ನು ಪೇರಡ್ಕ ಸಂಪರ್ಕಿಸುವ ಪೆರಂಗೋಡಿ ರಸ್ತೆ ಸಂಪೂರ್ಣ ಹದೆಗೆಟ್ಟು ಸಂಚಾರ ಯೋಗ್ಯವಲ್ಲದಾಗಿದ್ದು, ಪೇರಡ್ಕ ಸಂಪರ್ಕಿಸಬೇಕಾದರೆ ಅರಂತೋಡು ಅಡ್ಯಡ್ಕ ಮಾರ್ಗವಾಗಿ ಸಂಪರ್ಕಿಸಬೇಕಾಗಿದೆ.
Advertisement