Advertisement

ಹಿಂದೂ ಜಾಗರಣ ವೇದಿಕೆ ಮತ್ತು ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿ ಶಾಂತಿನಗರ ಪೈಚಾರು ಇದರ ಆಶ್ರಯದಲ್ಲಿ 32ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಯ ಸಮರೋಪ ಸಮಾರಂಭದಲ್ಲಿ ಸುಳ್ಯ ನಗರ ಪಂಚಾಯತ್ ಇದರ ಅಧ್ಯಕ್ಷರಾಗಿರುವ ವಿನಯ್ ಕುಮಾರ್ ಕಂದಡ್ಕರನ್ನು ಸನ್ಮಾನಿಸಲಾಯಿತು.

ಸುಳ್ಯದ ಶಾಂತಿನಗರದ ತಿರುಗೋ ಪ್ರದೇಶದಲ್ಲಿ ಎರಡು ಮಣ್ಣಿನ ದಿಬ್ಬಗಳನ್ನು ವ್ಯವಸ್ಥಿತವಾಗಿ ತೆರೆವುಗೊಳಿಸಿದ ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕರಿಗೆ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ನಿವೃತ್ತ ಯೋಧ ಮೋನಪ್ಪ, ನಾರಾಯಣ ಪಿ ಆರ್, ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ,ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಜಗದೀಶ್ ಎನ್.ಆರ್., ಖಜಾಂಜಿ ಚಂದ್ರಶೇಖರ ನೂಜಡಿ, ಸಂಚಾಲಕ ದಾಮೋದರ ಮಂಚಿ, ಕಾರ್ಯದರ್ಶಿ ನಾರಾಯಣ ಎಸ್.ಎಂ., ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚಾರಣ ಸಮಿತಿ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ಯೋಗೀಶ್ ಕೆ, ಖಜಾಂಚಿ ಹರಿಪ್ರಸಾದ್, ಶ್ರೀ ಪೂಮಾಣಿ ಕಿನ್ನುಮಾಣಿ ದೈವಸ್ಥಾನದ ಆಡಳಿತ ಮೂಕ್ತೆಸರರಾದ ಬಾಲಕೃಷ್ಣ ನಡುಬೆಟ್ಟು, ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನದ ಪ್ರಧಾನ ಅರ್ಚಕರಾದ ರಾಮಕೃಷ್ಣ ಎಸ್.ಎನ್., ಕಾರ್ಯಕರ್ತರುಗಳಾದ ವಾಸು ನಾಯ್ಕ, ಆನಂದ ಗೌಡ ಮಾನು ನಾಯ್ಕ ಭಾನುಪ್ರಕಾಶ್ ಗೌತಮ್ ಸೆರ್ಕಾಜೆ ಕೇಶವ ಕೆ, ಜತ್ತಪ್ಪ ಗೌಡ ಭರತ್ ಸಾಲ್ಯಾನ್ ವಿನಯ ಚಂದ್ರ ನಡುಬೆಟ್ಟು, ಬಾಲಕೃಷ್ಣ ನಡುಬೆಟ್ಟು, ಲೋಹಿತ್ ನೂಜಾಡಿ, ವಿನಯ್ ನೂಜಾಡಿ ಮತ್ತಿತರರು ಉಪಸ್ಥಿತರಿದ್ದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ