ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಿಂದಾಗಿ ಅಕ್ಷರಶಃ ಸ್ಥಬ್ದವಾಗಿದೆ, ಘೋರ ದುರಂತದಲ್ಲಿ 167 ಸಾವನಪ್ಪಿದ್ದು, 75 ಮೃತದೇಹಗಳ ಗುರುತು ಪತ್ತೆಯಾಗಿದೆ, ಅನೇಕ ಜನರು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಮುಂಡಕೈ ಮತ್ತು ಚುರಲ್ಮಳದಲ್ಲಿ ಭೂಕುಸಿತದಲ್ಲಿ ಅಸುನೀಗಿದವರ ಸಂಖ್ಯೆ 167 ಕ್ಕೆ ಏರಿದೆ. ಈ ಪೈಕಿ 123 ಸಾವುಗಳು ಅಧಿಕೃತವಾಗಿ ದೃಢಪಟ್ಟಿವೆ.
75 ಜನರನ್ನು ಗುರುತಿಸಲಾಗಿದೆ. ಮೃತರಲ್ಲಿ 91 ಮೃತದೇಹಗಳನ್ನು ಮೆಪ್ಪಾಡಿ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಮತ್ತು 32 ಮೃತದೇಹಗಳನ್ನು ನಿಲಂಬೂರು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಆಸ್ಪತ್ರೆಯಲ್ಲಿದ್ದ 123 ಮಂದಿಯ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಮಲಪ್ಪುರಂನಿಂದ ಮೃತ ದೇಹಗಳನ್ನು ವಯನಾಡಿಗೆ ತಂದ ನಂತರ, ಎಲ್ಲಾ ಮೃತ ದೇಹಗಳನ್ನು ಮೆಪ್ಪಾಡಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.