Advertisement

ರಾಜ್ಯ ಸರ್ಕಾರವು ಜನಸಾಮಾನ್ಯರಿಗೆ ಕೇವಲ ಭರವಸೆಯನ್ನು ಮಾತ್ರ ನೀಡುವುದು. ಆದರೆ ಯಾವುದೇ ಘೋಷಣೆಗಳು ಅಥವಾ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಕೇವಲ ಪ್ರಚಾರಕಷ್ಟೇ ರಾಜ್ಯ ಸರ್ಕಾರ ಸೀಮಿತವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಟಿಎಂ ಶಹೀದ್ ಸುದ್ದಿಗೋಷ್ಠಿಯಲ್ಲಿ‌ ತಿಳಿಸಿದ್ದಾರೆ. ಸಂದರ್ಭದಲ್ಲಿ ಮಾತನಾಡಿದ ಅವರು ಇದೇ ಕಳೆದ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಕಲ್ಲು ಗುಂಡಿ ಸಂಪಾಜೆ ಭಾಗದಲ್ಲಿ ಜನರು ನಾನ ರೀತಿಯ ಸಮಸ್ಯೆಗಳನ್ನು ಎದುರಿಸಿದರು. ಈ ಸಂದರ್ಭದಲ್ಲಿ ಸಂತ್ರಸ್ಥರನ್ನು ಭೇಟಿ ಮಾಡಿದ ರಾಜ್ಯ ಸರ್ಕಾರದ ಪ್ರತಿನಿಧಿಗಳು ಜನರಿಗೆ ಕೇವಲ ಆಶ್ವಾಸನೆಯನ್ನು ಮತ್ತು ಅನುದಾನದ ಘೋಷಣೆಯನ್ನು ನೀಡಿ ಹೋಗಿರುತ್ತಾರೆ. ಇದುವರೆಗೆ ಸಂಕಷ್ಟ ಎದುರಿಸಿದವರಿಗೆ ಯಾವುದೇ ರೀತಿಯ ಶಾಶ್ವತ ಪರಿಹಾರವನ್ನು ನೀಡುವಲ್ಲಿ ಅವರೆಲ್ಲರೂ ವಿಫಲರಾಗಿದ್ದಾರೆ ಎಂದು ಹೇಳಿದರು. ಅಲ್ಲದೆ ನಮ್ಮದೇ ಕ್ಷೇತ್ರದ ಶಾಸಕರು ಸಚಿವರಾಗಿದ್ದು ಸುಳ್ಯ ತಾಲೂಕಿನ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಲು ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದ್ದು ಇಡೀ ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ ಶೇಕಡ 50ರಷ್ಟು ಮಾತ್ರ ಅಧಿಕಾರಿಗಳು ಇದ್ದು ಬಾಕಿ ಇರುವ ಹುದ್ದೆಗಳು ಇಂದಿಗೂ ಖಾಲಿಯಾಗಿ ನಿಂತಿದೆ. ಇಲಾಖೆಗಳಲ್ಲಿ ಅಧಿಕಾರಿಗಳು ಇಲ್ಲದಿದ್ದರೆ ಸಾರ್ವಜನಿಕರಿಗೆ ಯಾವ ರೀತಿಯ ಸೇವೆಯನ್ನು ನೀಡಲು ಇವರಿಗೆ ಸಾಧ್ಯ? ಎಂದು ಪ್ರಶ್ನಿಸಿದರು. ದಿನನಿತ್ಯ ಬಳಸುವ ಆಹಾರ ಸಾಮಗ್ರಿಗಳಾದ ಅಕ್ಕಿ, ಬೇಳೆ, ಮೆಣಸು, ಸಕ್ಕರೆ ಚಾಹುಡಿ ಮುಂತಾದ ವಸ್ತುಗಳ ಬೆಲೆ ಗಗನಕ್ಕೇರಿ ಜನಸಾಮಾನ್ಯರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇವೆಲ್ಲದರ ಬಗ್ಗೆ ಮಾತನಾಡುವವರನ್ನು ಬಾಯಿ ಮುಚ್ಚಿಸುವ ಪ್ರಯತ್ನವನ್ನು ಆಡಳಿತರೂಢ ಬಿಜೆಪಿ ಪಕ್ಷ ಮಾಡುತ್ತಿದೆ ಎಂದು ಅವರು ಹೇಳಿದರು.

ಪಿ ಎಫ್ ಐ ಸಂಘಟನೆಗೆ ಐದು ವರ್ಷಗಳ ನಿರ್ಬಂಧ ಏರಿರುವ ವಿಷಯದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ದೇಶದಲ್ಲಿ ಅಶಾಂತಿ ಉಂಟುಮಾಡುವವರ ವಿರುದ್ಧ ಸರ್ಕಾರಗಳು ಕ್ರಮ ಕೈಗೊಳ್ಳುವಂತದ್ದು ಸ್ವಾಭಾವಿಕವಾಗಿ ಇರುತ್ತದೆ. ಆದರೆ ತಾರತಮ್ಯ ನೀತಿ ಸರಿಯಲ್ಲ ಎಂದು ಅವರು ಹೇಳಿದರು. ಇಲ್ಲಿ ಕೇವಲ ಮುಸಲ್ಮಾನರನ್ನು ಮಾತ್ರ ಒಂದು ದೃಷ್ಟಿಯಿಂದ ನೋಡುವುದು ಮತ್ತೊಂದು ಕಡೆ ಇನ್ನೊಂದು ಸಂಘಟನೆಗಳ ಬಗ್ಗೆ ಏನು ಮಾತನಾಡದೆ ಅವರಿಗೆ ಪ್ರೋತ್ಸಾಹ ನೀಡುವ ರೀತಿಯಲ್ಲಿ ಉತ್ತೇಜನ ನೀಡುವುದು ಇದು ವೋಟ್ ಬ್ಯಾಂಕಿಗೆ ಮಾತ್ರ ಮಾಡುತ್ತಿರುವ ಹಾಗೆ ಕಾಣುತ್ತಿದೆ. ಜಿಲ್ಲೆಯಲ್ಲಿ ಇತ್ತೀಚಿಗೆ ಮೂರು ಹತ್ಯೆಗಳು ನಡೆದಿದ್ದು ಅದರಲ್ಲಿ ಮಸಾಜ್ ಮತ್ತು ಅಝರ್ ಎಂಬುವರಿಗೆ ಸರಕಾರ ಯಾವುದೇ ಪರಿಹಾರವನ್ನು ಕೊಡದೆ ನಿರ್ಲಕ್ಷ ತೋರಿಸಿರಿವುದು ಇವರ ದ್ವಂದ ನೀತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಗರ ಪಂಚಾಯತಿ ಸದಸ್ಯ ಶರೀಫ್ ಕಂಠಿ ಮಾತನಾಡಿ ಸುಳ್ಯ ನಗರದ ವಿವಿಧ ವಾರ್ಡುಗಳಲ್ಲಿ ರಸ್ತೆಗಳು ಅಸಮರ್ಪಕವಾಗಿದ್ದು ಸಚಿವರು ಇತ್ತ ಗಮನ ಹರಿಸಬೇಕಾಗಿದೆ ಎಂದು ಹೇಳಿದರು. ಪ್ಲಾಸ್ಟಿಕ್ ಗಳನ್ನು ಬ್ಯಾನ್ ಮಾಡುವವರು ಕೇವಲ ಜನಸಾಮಾನ್ಯರು ಬಳಸುವಂತಹ ಕೈಚೀಲದ ಪ್ಲಾಸ್ಟಿಕ್ ಗಳನ್ನು ಮಾತ್ರ ಬ್ಯಾನ್ ಮಾಡಿದರೆ ಸಾಲದು. ನಗರ ಪ್ರದೇಶದಲ್ಲಿ ಹೆಚ್ಚಾಗಿ ಅಲ್ಲಲ್ಲಿ ಕಂಡು ಬರುತ್ತಿರುವ ಕುರುಕುರೆ ಪ್ಯಾಕೇಟ್ಸ್ ಗಳು, ಇನ್ನಿತರ ನೂರಾರು ಬಳಕೆಗಳ ಪ್ಲಾಸ್ಟಿಕ್ ಗಳು ಇವುಗಳನ್ನು ಮೊದಲು ಬ್ಯಾನ್ ಮಾಡಬೇಕಾಗಿದೆ ಈ ರೀತಿ ಕಾರ್ಯಗಳು ಮಾಡಿದರೆ ಇದಕ್ಕೆ ಎಲ್ಲರೂ ಸಹಮತ ತೋರಬಹುದು. ಇಲ್ಲದಿದ್ದರೆ ಕೇವಲ ಜನರನ್ನು ಮರಳು ಮಾಡುವ ಯೋಜನೆಗಳನ್ನು ತಂದು ಯಾವುದೇ ಪ್ರಯೋಜನವಿಲ್ಲ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಎಸ್ ಕೆ ಅನಿಫಾ, ವಿಜಯ್ ಕುಮಾರ್ ಉಪಸ್ಥಿತರಿದ್ದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ