Advertisement

ಅಜ್ಜಾವರ ಗ್ರಾಮದ ಮೇನಾಲ ಡಾ ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿದ್ದ ಅಂಬೇಡ್ಕರ್ ಅವರ ಭಾವುಟವನ್ನು ಅಜ್ಜಾವರ ಪಂಚಾಯತ್ ತೆರವುಗೊಳಿಸಿದ್ದ ಘಟನೆ ನಡೆದಿದ್ದು ಈ ಬಗ್ಗೆ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಸಮಿತಿಯ ಜಿಲ್ಲಾ ಮತ್ತು ಸುಳ್ಯ ತಾಲೂಕು, ಅಜ್ಜಾವರ ಘಟಕ ಸಮಿತಿಯ ಪದಾಧಿಕಾರಿಗಳು ಪಂಚಾಯತ್ ಗೆ ಭೇಟಿ ನೀಡಿ ಗ್ರಾ. ಪಂ. ಅಧ್ಯಕ್ಷರು, ಪಿಡಿಓ ಅವರನ್ನ ತರಾಟೆಗೆ ತೆಗೆದುಕೊಂಡರು. ಸಂಘಟನೆಯ ತಾಲೂಕು ಅಧ್ಯಕ್ಷರಾದ ಸತೀಶ್ ಬೂಡುಮಕ್ಕಿರವರು ಮಾತಾಡಿ ಮೇನಾಲದ ಅಂಬೇಡ್ಕರ್ ಸಮುದಾಯ ಭವನದಲ್ಲಿದ್ದ ಅಂಬೇಡ್ಕರ್ ಅವರ ಭಾವ ಚಿತ್ರ ಯಾರಿಗೂ ತೊಂದರೆ ಉಂಟುಮಾಡುವ ಜಾಗದಲ್ಲಿ ಇರಲಿಲ್ಲ. ಬಾವುಟವನ್ನು ಏಕಾಏಕಿಯಾಗಿ ಪಂಚಾಯತ್ ಅಧಿಕಾರಿಯವರು ತೆರವುಗೊಳಿಸಿದ್ದು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವಾಗಿದೆ. ಈ ಘಟನೆಯು ನಮ್ಮೆಲ್ಲರಿಗೂ ನೋವುಂಟು ಮಾಡಿದ್ದು ಭಾವುಟವನ್ನು ಕೂಡಲೇ ಹಾಕಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಪಂಚಾಯತ್ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು. ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಐವರ್ನಾಡು ರವರು ಮಾತನಾಡಿ ಧ್ವಜ ತೆರವುಗೊಳಿಸಿದ ಪಿಡಿಓರವರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಮಾಡಿದ ಅಗೌರವ ಕೂಡಲೇ ಧ್ವಜ ಹಾಕಬೇಕೆಂದು ಒತ್ತಾಯಿಸಿದರು. ಅಜ್ಜಾವರ ಪಂಚಾಯತ್ ಅಧ್ಯಕ್ಷರಾದ ಸತ್ಯವತಿರವರು ಸಮಯಾವಕಾಶ ಕೇಳಿ ಮನವಿಗೆ ಪ್ರಮಾಣಿಕವಾಗಿ ಸ್ಪಂದಿಸುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಸಂಘಟನೆಯ ಕಾರ್ಯದರ್ಶಿಗಳಾದ ಸುನಿಲ್ ಗಂಧದಗುಡ್ಡೆ,ಸಂಘಟನಾ ಕಾರ್ಯದರ್ಶಿ- ಅಜ್ಜಾವರ ಪಂಚಾಯತ್ ಸದಸ್ಯರಾದ ರಾಘವ ಮುಳ್ಯಕಜೆ, ಸಂಘಟನೆಯ ಅಜ್ಜಾವರ ಘಟಕ ಅಧ್ಯಕ್ಷರಾದ ಹರೀಶ್ ಮೇನಾಲರವರು,ಉಪಾಧ್ಯಕ್ಷರಾದ ಚಿದಾನಂದ ಗಂಧದಗುಡ್ಡೆ, ಅಜ್ಜಾವರ ಪಂಚಾಯತ್ ಮಾಜಿ ಸದಸ್ಯರಾದ ಗಣೇಶ್ ಮಾವಿನಪಳ್ಳ ಹಾಗೂ ಸಂಘಟನೆ ಪದಾಧಿಕಾರಿಗಳಾದ ದಯಾನಂದ ಗಂಧದಗುಡ್ಡೆ,ಶಶಿಧರ ಗಂಧದಗುಡ್ಡೆ, ಕಿರಣ್ ಅಡೂರು,ಮದುಸೂದನ ಕಾಟಿಪಳ್ಳ, ನಾಗರಾಜ ಕಾಂತಮಂಗಲ,ನಾಗೇಶ್ ಕಾಂತಮಂಗಲ, ದೀಕ್ಷಿತ್ ಗಂಧದಗುಡ್ಡೆ,ದಿವಾಕರ ಹನಿಯಡ್ಕರವರು ಹಾಜರಿದ್ದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ