ಸುಳ್ಯ: ವರುಣ ಆರ್ಭಟ ಜೋರಾಗೆ ಇದೆ. ಸುಳ್ಯ ತಾಲೂಕು ಸೇರಿದಂತೆ ಸುತ್ತ ಮುತ್ತ ಎಲ್ಲಾ ಜಿಲ್ಲೆಗಳಲ್ಲೂ ಮಳೆಯ ಆರ್ಭಟ ಹೆಚ್ಚಾಗಿದೆ. ಈಗಾಗಲೇ ಮಳೆಯಿಂದಾಗಿ ಅನೇಕ ಕಡೆ ಪ್ರಕೃತಿ ವಿಕೋಪಗಳ, ನಾಶ ನಷ್ಟಗಳು ಸಂಭವಿಸುತ್ತಿದೆ. ಇಂತಹಾ ಯಾವುದೇ ತೊಂದರೆಗಳು ಅವಘಡಗಳು,ಅನಾಹುತಗಳು ಸಂಭವಿಸಿದ್ದಲ್ಲಿ ಕೂಡಲೇ ತಮಗೆ ಕರೆ ಮಾಡಬಹುದು ಎಂದು ಅಸ್ತ್ರ ಸ್ಪೋರ್ಟ್ಸ್ ಅಧ್ಯಕ್ಷರಾದ ಲತೀಫ್ ಟಿಎ ಹಾಗೂ ಮುಳುಗು ತಜ್ಞರ ತಂಡದ ಹಿರಿಯ ಮುಳುಗು ತಜ್ಞ ಅಬ್ಬಾಸ್ ಶಾಂತಿನಗರ ತಿಳಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದೀಚೆಗೆ ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನದಿ-ನೀರಿನಲ್ಲಿರುವ ಶವಗಳನ್ನು ಮೇಲೆತ್ತುವಲ್ಲಿ ಹೆಸರು ವಾಸಿಯಾಗಿರುವ ಪೈಚಾರಿನ ಮುಳುಗು ತಜ್ಞರ ತಂಡ ಯಾವುದೇ ತುರ್ತು ಸಂಧರ್ಭದಲ್ಲೂ ತಮ್ಮ ಸೇವೆಗೆ ಸಿದ್ದ ಎಂದು ಕಾರುಣ್ಯ ಆಂಬ್ಯುಲೆನ್ಸ್ ಹಾಗೂ ಸಂಘ ಸಂಸ್ಥೆಗಳು ಅಧ್ಯಕ್ಷರುಗಳು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಮುಜೀಬ್ ತಿಳಿಸಿರುತ್ತಾರೆ.
ತುರ್ತು ಸೇವೆಗೆ ಕರೆ ಮಾಡಿ
• ಮುಜೀಬ್ (ಸದಸ್ಯರು ಗ್ರಾಮ ಪಂಚಾಯತ್ ಜಾಲ್ಸೂರು) 9482035890
•ಲತೀಫ್ ಟಿಎ (ಅಧ್ಯಕ್ಷರು ಅಸ್ತ್ರ ಸ್ಪೋರ್ಟ್ಸ್ & ಸೋಶಿಯಲ್ ಕ್ಲಬ್) 9483292927
•ಬಶೀರ್ ಆರ್ ಬಿ (ಅಧ್ಯಕ್ಷರು ಕಾರುಣ್ಯ ಚಾರಿಟೇಬಲ್ ಟ್ರಸ್ಟ್) 9449141899
•ಅಶ್ರಫ್ ಅಧ್ಯಕ್ಷರು (ಅಲ್ ಅಮೀನ್ ಯೂತ್.ಸೆಂಟರ್ ಪೈಚಾರ್) 8495951575
•ಶಿಹಾಬ್ ಫಾರೆವರ್ ಬೆಟ್ಟಂಪಾಡಿ 9901725762
•ಸಾಲಿ ಫೈವ್ ಸ್ಟಾರ್.8970598253