ಪೆರಾಜೆ: ಚಾಲಕನ ನಿಯಂತ್ರಣ ತಪ್ಪಿ ತಾರ್ ಜೀಪ್ ತಡೆಬಲಿಗೆ ಡಿಕ್ಕಿ ಹೊಡೆದಿದೆ. ರಸ್ತೆಯ ಬದಿ ತಡೆಬೇಲಿಯಿಂದಾಗಿ ನಡೆಯಬಹುದಾದ ಭಾರಿ ಅನಾಹುತ ಒಂದು ಅದೃಷ್ಟವಶಾತ್ ತಪ್ಪಿದೆ.
ಪೆರಾಜೆ ಕಡೆಯಿಂದ ಸುಳ್ಯ ಕಡೆ ಬರುತ್ತಿದ್ದ ತಾರ್ ಜೀಪ್ ಒಂದು ಮಳೆಯ ಕಾರಣದಿಂದಾಗಿ ನಿಯಂತ್ರಣ ತಪ್ಪಿದೆ. ಜೀಪ್ ತಡೆ ಬೇಲಿಗೆ ಡಿಕ್ಕಿ ಹೊಡೆದು ಚಾಲಕಣ ನಿಯಂತ್ರಣ ತಪ್ಪಿ ಸರಿ ಸುಮಾರು 100ಮೀ ಮುಂದಕ್ಕೆ ಚಲಿಸಿ, ಅಲ್ಲೂ ತಡೆಬೇಲಿಗೆ ಡಿಕ್ಕಿ ಹೊಡೆದಯ ರಸ್ತೆಗೆ ಅಡ್ಡಲಾಗಿ ನಿಂತಿದೆ. ತಡಬೇಲಿ ಇಲ್ಲದೇ ಹೋಗಿದ್ದರೆ, ಮುಂದೆ ಇರುವ ಮನೆಗೆ ಡಿಕ್ಕಿ ಹೊಡೆದು ಅನಾಹುತ ಸಂಭವಿಸುತ್ತಿತ್ತು, ಅದೃಷ್ಟವಶಾತ್ ಅಂತಹ ಯಾವುದೇ ಪರಿಸ್ಥಿತಿ ಸಂಭವಿಸಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.