Advertisement
ಸುಳ್ಯ: ಅಮಿಗೋಸ್ ಎಫ್.ಸಿ ಅರ್ಪಿಸಿದ ಸೀಸನ್ 3 ಫುಟ್ಬಾಲ್ ಲೀಗ್ ಪಂದ್ಯಾಟ ಅಕ್ಟೋಬರ್2 ರಂದು ಶಾಂತಿನಗರ ಕ್ರೀಡಾಂಗಣದಲ್ಲಿ ನಡೆಯಿತು. ಒಟ್ಟು ಆರು ತಂಡಗಳ ಈ ಲೀಗ್ ಮಾದರಿಯ ಪಂದ್ಯಾಕೂಟದಲ್ಲಿ

ವಾಟ್ಫಾರ್ಡ್ ಎಫ್.ಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ರನ್ನರ್ ಅಪ್ ಪ್ರಶಸ್ತಿಯನ್ನು ಅಸ್ತ್ರ ಟ್ರಾನ್ಸ್ಪೋರ್ಟ್ಸ್ ಪಡೆದುಕೊಂಡಿತು.

ವೈಯುಕ್ತಿಕ ಆಟಗಾರರಾಗಿ, ಬೆಸ್ಟ್ ಗೋಲ್ ಕೀಪರ್ ಅಫ್ರೀದ್, ಬೆಸ್ಟ್ ಡಿಫೆಂಡರ್ ರುಫೈದ್, ಬೆಸ್ಟ್ ಸ್ಟ್ರೈಕರ್ ಅಷ್ಪಾಕ್, ಪ್ಲೆ ಮೇಕರ್ ಅವಾರ್ಡ್ ಸುನು, ಮ್ಯಾನ್ ಆಫ್ ದಿ ಸೀರಿಸ್ ಜುನೈದ್ ಪಡೆದುಕೊಂಡರು. ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಬಶೀರ್ ಆರ್.ಬಿ, ರಿಫಾಯಿ, ಝುಬೈರ್ ಉಬಿ, ಆರೀಫ್, ರಿಝ್ವಾನ್, ಹರ್ಷಾದ್ ಪ್ರಗತಿ ಉಪಸ್ಥಿತರಿದ್ದರು.
Advertisement